ಲಖನೌ: ಮಥುರಾ ಗಲಭೆಯಲ್ಲಿ ಮೃತಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಕುಲ್ ದ್ವಿವೇದಿ ಅವರ ಪತ್ನಿಗೆ ಉತ್ತರ ಪ್ರದೇಶ ಸರ್ಕಾರ ಗೆಜೆಟೆಡ್ ಆಫೀಸರ್ ಹುದ್ದೆ ನೀಡಿದೆ.
ಮುಕುಲ್ ದ್ವಿವೇದಿ ಅವರ ಪತ್ನಿ ಅರ್ಚನಾ ದ್ವಿವೇದಿ ಅವರಿಗೆ ಗೆಜೆಟೆಡ್ ಆಫೀಸರ್ ಹುದ್ದೆ ನೀಡುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಉತ್ತರ ಪ್ರದೇಶ ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವಾರ ‘ಆಜಾದ್ ಭಾರತ ವಿಧಿಕ್ ವೈಚಾರಿಕ ಕ್ರಾಂತಿ ಸತ್ಯಾಗ್ರಹಿ’ಸದಸ್ಯರು ಮಥುರಾದ ಜವಾಹರ್ಬಾಗ್ನಲ್ಲಿ ನಡೆದ ಪ್ರತಿಭಟನೆ ವೇಳೆ ಗುಂಪು ಚದುರಿಸಲು ಪೊಲೀಸರು ಯತ್ನಿಸಿದಾಗ ಉದ್ರಿಕ್ತ ಜನರು ತುಪಾಕಿಯಿಂದ ಗುಂಡಿನ ದಾಳಿ ನಡೆಸಿದ್ದರು. ಈ ಹಿಂಸಾಚಾರದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮುಕುಲ್ ದ್ವಿವೇದಿ ಸಹಿತ ಹಲವರು ಸಾವನ್ನಪ್ಪಿದ್ದರು.
ರಾಷ್ಟ್ರೀಯ
Comments are closed.