ಹರಾರೆ (ಪಿಟಿಐ): ಒಂದು ಪಂದ್ಯ ಬಾಕಿ ಇರುವ ಮೊದಲೇ ಸರಣಿ ಗೆದ್ದುಕೊಂಡಿದ್ದ ಭಾರತ ತಂಡ ಕೊನೆಯ ಪಂದ್ಯದಲ್ಲಿಯೂ ವಿಜೃಂಭಿಸಿತು. ಇದರಿಂದ ಜಿಂಬಾಬ್ವೆ ವಿರುದ್ಧದ ಏಕದಿನ ಕ್ರಿಕೆಟ್‌ಸರಣಿಯಲ್ಲಿ ‘ಕ್ಲೀನ್‌ಸ್ವೀಪ್’ ಸಾಧಿಸಿತು.
ಹರಾರೆ ಸ್ಪೋರ್ಟ್ಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ಗೆದ್ದು ಮೊದಲು ಬ್ಯಾಟ್‌ಮಾಡಿದ ಆತಿಥೇಯರು 42.2 ಓವರ್‌ಗಳಲ್ಲಿ 123 ರನ್ ಗಳಿಸುವಷ್ಟರಲ್ಲಿ ಆಲೌಟ್‌ಆದರು. ಅಲ್ಪ ಮೊತ್ತದ ಗುರಿಯನ್ನು ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಭಾರತ ತಂಡ 21.5 ಓವರ್‌ಗಳಲ್ಲಿ ವಿಕೆಟ್‌ನಷ್ಟವಿಲ್ಲದೆ ಮುಟ್ಟಿತು.
ಈ ಮೂಲಕ ಭಾರತ ತಂಡ ಜಿಂಬಾಬ್ವೆ ವಿರುದ್ಧ ತನ್ನ ಪ್ರಾಬಲ್ಯ ಮುಂದುವರಿಸಿತು. 2013 ಮತ್ತು 2015ರ ಸರಣಿಗಳಲ್ಲಿ ಭಾರತ ಆಡಿದ ಎಲ್ಲಾ ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಇದೇ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವಾಡುವ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬಲಗೈ ವೇಗಿ ಜಸ್‌ಪ್ರೀತ್‌ಬೂಮ್ರಾ ಮತ್ತು ಯಜುವೇಂದ್ರ ಚಾಹಲ್‌ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರಿಬ್ಬರೂ ಕ್ರಮವಾಗಿ ನಾಲ್ಕು ಮತ್ತು ಎರಡು ವಿಕೆಟ್‌ಕಬಳಿಸಿ ಆತಿಥೇಯ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.
ಭಾರತ ವಿರುದ್ಧದ ಹಿಂದಿನ ಏಕದಿನ ಪಂದ್ಯಗಳಲ್ಲಿ ಜಿಂಬಾಬ್ವೆ ಕಳಪೆಯಾಗಿ ಆಡಿದೆ. ಈ ಸರಣಿಗೂ ಮೊದಲು 60 ಪಂದ್ಯಗಳನ್ನಾಡಿದ್ದ ಆತಿಥೇಯರು ಹತ್ತರಲ್ಲಷ್ಟೇ ಜಯ ಪಡೆದಿದ್ದಾರೆ.
ಆದರೂ ಈ ಪಂದ್ಯ ಭಾರತಕ್ಕೆ ಸವಾಲು ಎನಿಸಿತ್ತು. ಏಕೆಂದರೆ ತಂಡದ ಬೆಂಚ್‌ಸ್ಟ್ರಂಥ್‌ಬಲಗೊಳಿಸುವ ಸಲುವಾಗಿ ಬಿಸಿಸಿಐ ಆಯ್ಕೆ ಸಮಿತಿ ಹೊಸ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿತ್ತು. ಕೆ.ಎಲ್. ರಾಹುಲ್, ಕರುಣ್ ನಾಯರ್, ಫಯಾಜ್‌ಫಜಲ್,
ಮನದೀಪ್‌ಸಿಂಗ್, ಜಯಂತ್ ಯಾದವ್‌ಮತ್ತು ಯಜುವೇಂದ್ರ ಚಾಹಲ್‌ಅವರು ಏಕದಿನ ಮಾದರಿಗೆ ಪದಾರ್ಪಣೆ ಮಾಡಿರಲಿಲ್ಲ. ಇವರಲ್ಲಿ ನಾಲ್ವರು ಆಟಗಾರರಿಗೆ ಪದಾರ್ಪಣೆ ಮಾಡಲು ಅವಕಾಶ ಲಭಿಸಿತು. ಇದನ್ನು ಸಮರ್ಥವಾಗಿ ಬಳಸಿಕೊಂಡ ಕರ್ನಾಟಕದ ರಾಹುಲ್‌ಚೊಚ್ಚಲ ಅವಕಾಶದಲ್ಲಿಯೇ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಮೂರೂ ಪಂದ್ಯಗಳಲ್ಲಿ ಮೊದಲು ಬ್ಯಾಟ್‌ಮಾಡಿರುವ ಜಿಂಬಾಬ್ವೆ 200ಕ್ಕಿಂತಲೂ ಹೆಚ್ಚು ರನ್ ಗಳಿಸಿಲ್ಲ. ಮೊದಲ ಪಂದ್ಯದಲ್ಲಿ 168 ರನ್‌ಕಲೆ ಹಾಕಿದ್ದೇ ಆತಿಥೇಯರ ಈ ಸರಣಿಯ ಗರಿಷ್ಠ ರನ್‌ಎನಿಸಿದೆ. ಎರಡನೇ ಪಂದ್ಯದಲ್ಲಿ 126 ರನ್‌ಗೆ ಆಲೌಟ್‌ಆಗಿತ್ತು. ಕೊನೆಯ ಹೋರಾಟದಲ್ಲಿಯೂ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣವಾಯಿತು.
ಜಿಂಬಾಬ್ವೆ ತಂಡದ ಅರಂಭಿಕ ಬ್ಯಾಟ್ಸ್‌ಮನ್‌ಗಳಾದ ಹ್ಯಾಮಿಲ್ಟನ್‌ಮಸಕಜಾ ಮತ್ತು ಚಾಮು ಚಿಬಾಬಾ ಬೇಗನೆ ವಿಕೆಟ್ ಒಪ್ಪಿಸಿದರು. ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ವುಸಿ ಸಿಬಂದಾ (38, 85 ನಿಮಿಷ, 71 ಎಸೆತ, 2 ಬೌಂಡರಿ, 1 ಸಿಕ್ಸರ್‌್) ಆಸರೆಯಾದರು.
ಮೊದಲ 28.4 ಓವರ್‌ಗಳು ಪೂರ್ಣಗೊಂಡ ವೇಳೆ ಜಿಂಬಾಬ್ವೆ ಮೂರು ವಿಕೆಟ್‌ಕಳೆದುಕೊಂಡು 89 ರನ್ ಗಳಿಸಿತ್ತು. ಆದರೆ, ನಾಲ್ಕು ಎಸೆತಗಳಲ್ಲಿ ಸತತ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯಿತು.
32.5ನೇ ಓವರ್‌ನಲ್ಲಿ ಮುರ್ಮಾ, ನಂತರದ ಎಸೆತದಲ್ಲಿ ಚಿಗುಂಬರಾ ಔಟಾದರು. ನಂತರದ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ವಾಲ್ಲರ್‌ಮತ್ತು ಕ್ರೆಮರ್‌ಪೆವಿಲಿಯನ್‌ಸೇರಿದರು.ಇದರಲ್ಲಿ ಬೂಮ್ರಾ ಎರಡು ವಿಕೆಟ್ ಪಡೆದರು.
ಮತ್ತೆ ರಾಹುಲ್‌ಆರ್ಭಟ: ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಶತಕ ಬಾರಿಸಿದ್ದ ಕರ್ನಾಟಕ ರಾಹುಲ್‌ಅವರ ಸೊಗಸಾದ ಆಟ ಕೊನೆ ಪಂದ್ಯದಲ್ಲೂ ಮುಂದುವರಿಯಿತು.
ರಾಹುಲ್(ಔಟಾಗದೆ 63, 99 ನಿಮಿಷ, 70 ಎಸೆತ, 4 ಬೌಂಡರಿ, 2 ಸಿಕ್ಸರ್) ಮತ್ತು ಫಯಾಜ್ ಫಜಲ್(ಔಟಾಗದೆ 55, 99 ನಿಮಿಷ, 61 ಎಸೆತ, 7 ಬೌಂಡರಿ, 1ಸಿಕ್ಸರ್) ಉತ್ತಮವಾಗಿ ಆಡಿ ಗೆಲುವು ತಂದುಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 126 ರನ್ ಕಲೆ ಹಾಕಿತು.
ಅಲ್ಪ ಮೊತ್ತದ ಗುರಿಯಾಗಿದ್ದ ಕಾರಣ ಬ್ಯಾಟ್ಸ್‌ಮನ್‌ಗಳ ಮೇಲೆ ಯಾವ ಒತ್ತಡ ಇರಲಿಲ್ಲ. ರಾಹುಲ್‌ಮತ್ತು ಫಜಲ್‌ಇಬ್ಬರಿಗೂ ಇದು ಚೊಚ್ಚಲ ಅಂತರರಾಷ್ಟ್ರೀಯ ಟೂರ್ನಿ. ಆದ್ದರಿಂದ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು.
ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳು ಆರಂಭದಲ್ಲಿ ವಿಕೆಟ್‌ಬೀಳದಂತೆ ಎಚ್ಚರಿಕೆ ವಹಿಸಿದರು. ಮೊದಲ ಹತ್ತು ಓವರ್‌ಗಳು ಪೂರ್ಣಗೊಂಡಾಗ 43 ರನ್‌ಗಳಷ್ಟೇ ಖಾತೆಯಲ್ಲಿದ್ದವು.
ನಂತರ ನಿಧಾನವಾಗಿ ರನ್ ವೇಗ ಹೆಚ್ಚಿಸಿದರು. 13ನೇ ಓವರ್‌ನಲ್ಲಿ ಬಲಗೈ ಬ್ಯಾಟ್ಸ್‌ಮನ್‌ರಾಹುಲ್ ಹ್ಯಾಟ್ರಿಕ್‌ಬೌಂಡರಿ ಸಿಡಿಸಿದರು. ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟ್ವೆಂಟಿ–20 ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಶನಿವಾರ ಜರುಗಲಿದೆ.
3 ವರ್ಷ, 11 ಪಂದ್ಯ, 0 ಜಯ!
2013ರಿಂದ 2016ರ ಅವಧಿಯಲ್ಲಿ ಉಭಯ ತಂಡಗಳ ನಡುವೆ ಮೂರು ಏಕದಿನ ಸರಣಿಗಳು ನಡೆದಿವೆ. ಈ ಸರಣಿಗಳಲ್ಲಿ 11 ಪಂದ್ಯಗಳು ಜರುಗಿವೆ. ಜಿಂಬಾಬ್ವೆ ಒಂದೂ ಪಂದ್ಯದಲ್ಲಿ ಗೆಲುವು ಪಡೆದಿಲ್ಲ. 2013ರಲ್ಲಿ ಐದು, 2015 ಮತ್ತು 2016ರಲ್ಲಿ ಮೂರು ಪಂದ್ಯಗಳ ಸರಣಿ ನಡೆದಿವೆ. 2010ರ ಜಿಂಬಾಬ್ವೆ ಜಯ ಪಡೆದದ್ದೇ ಕೊನೆಯದು.
*
ಎದುರಾಳಿ ತಂಡವನ್ನು ಬೌಲರ್‌ಗಳು ಬೇಗನೆ ಕಟ್ಟಿ ಹಾಕಿದ್ದರಿಂದ ನಮ್ಮ ಕೆಲಸ ಸುಲಭವಾಯಿತು. ಹಿಂದಿನ ಕೆಲ ಟೂರ್ನಿ ಗಳಿಂದ ಉತ್ತಮ ಲಯದಲ್ಲಿದ್ದೇನೆ. ಅದನ್ನು ಉಳಿಸಿಕೊಳ್ಳುವ ಸವಾಲು ನನ್ನ ಮುಂದಿತ್ತು.
ಕೆ.ಎಲ್. ರಾಹುಲ್
*
ಪಂದ್ಯವನ್ನು ಸುಲಭವಾಗಿ ಗೆಲ್ಲುವ ಬಗ್ಗೆ ವಿಶ್ವಾಸವಿತ್ತು. ಆದರೆ ವೇಗಿಗಳು ಮತ್ತು ಸ್ಪಿನ್ನರ್‌ಗಳು ಚೆನ್ನಾಗಿ ಬೌಲಿಂಗ್ ಮಾಡ ಬೇಕು ಎಂಬುದು ನನ್ನ ಗುರಿಯಾಗಿತ್ತು. ಅಂದುಕೊಂಡಂತೆಯೇ ಆಗಿದೆ.
ಮಹೇಂದ್ರ ಸಿಂಗ್ ದೋನಿ
ಸ್ಕೋರ್‌ಕಾರ್ಡ್
ಜಿಂಬಾಬ್ವೆ 123 (42.2 ಓವರ್‌ಗಳಲ್ಲಿ)
ಹ್ಯಾಮಿಲ್ಟನ್‌ಮಸಕಜಾ ಸಿ. ಕೆ.ಎಲ್. ರಾಹುಲ್‌ಬಿ. ಧವಳ್‌ಕುಲಕರ್ಣಿ 08
ಚಾಮು ಚಿಬಾಬಾ ಸಿ. ಜಸ್‌ಪ್ರೀತ್‌ಬೂಮ್ರಾ ಬಿ. ಯಜುವೇಂದ್ರ ಚಾಹಲ್ 27
ವುಸಿ ಸಿಬಂದಾ ಸಿ ಮತ್ತು ಬಿ ಯಜುವೇಂದ್ರ ಚಾಹಲ್ 38
ಟಿಮಿಸನ್‌ಮುರುಮ್‌ಬಿ. ಜಸ್‌ಪ್ರೀತ್ ಬೂಮ್ರಾ 17
ಮೆಕ್ಲಮ್‌ವಾಲ್ಲರ್‌ರನ್‌ಔಟ್(ರಾಹುಲ್/ದೋನಿ) 08
ಎಲ್ಟನ್‌ಚಿಗುಂಬರಾ ಸಿ. ದೋನಿ ಬಿ. ಜಸ್‌ಪ್ರೀತ್ ಬೂಮ್ರಾ 00
ರಿಚ್‌ಮಂಡ್ ಮುತುಂಬಮಿ ಸಿ. ರಾಹುಲ್‌ಬಿ. ಜಸ್‌ಪ್ರೀತ್ ಬೂಮ್ರಾ 04
ಗ್ರೆಮ್‌ಕ್ರೆಮರ್‌ಎಲ್‌ಬಿಡಬ್ಲ್ಯು ಬಿ. ಅಕ್ಷರ್ ಪಟೇಲ್ 00
ನೆವಿಲ್ಲೆ ಮಾಡ್ಜಿವಾ ಔಟಾಗದೆ 10
ತವಂದಾ ಮುಪರಿವಾ ಸಿ. ಮನೀಷ್‌ಪಾಂಡೆ ಬಿ. ಜಸ್‌ಪ್ರೀತ್ ಬೂಮ್ರಾ 01
ಡೊನಾಲ್ಡ್‌ತಿರಿಪನೊ ರನ್ ಔಟ್(ಧವಳ್‌ಕುಲಕರ್ಣಿ) 02
ಇತರೆ: (ಲೆಗ್‌ಬೈ–3, ವೈಡ್–4, ನೋ ಬಾಲ್–1) 08
ವಿಕೆಟ್‌ಪತನ: 1–19 (ಮಸಜಕಾ; 5.3), 2–55 (ಚಿಬಾಬಾ; 20.1), 3–89 (ಸಿಬಂದಾ; 28.4), 4–104 (ಮರ್ಮು; 32.5), 5–104 (ಚಿಗುಂಬರಾ; 32.6), 6–104 (ವಾಲ್ಲರ್; 33.1), 7–104 (ಕ್ರೆಮರ್; 33.2), 8–108 (ಮುತುಂಬಮಿ; 34.3), 9–110 (ಮುಪರಿವಾ; 36.4), 10–123 (ತಿರಿಪನೊ; 42.2).
ಬೌಲಿಂಗ್: ಬರೀಂದರ್‌ಸರಾನ್8–0–40–0, ಧವಳ್‌ಕುಲಕರ್ಣಿ 6.2–1–17–1, ಜಸ್‌ಪ್ರೀತ್ ಬೂಮ್ರಾ 10–1–22–4, ಅಕ್ಷರ್‌ಪಟೇಲ್10–2–16–1, ಯಜುವೇಂದ್ರ ಚಾಹಲ್8–0–25–2.
ಭಾರತ ವಿಕೆಟ್‌ನಷ್ಟವಿಲ್ಲದೆ 124 (21.5 ಓವರ್‌ಗಳಲ್ಲಿ)
ಕೆ.ಎಲ್. ರಾಹುಲ್‌ಔಟಾಗದೆ 63
ಫಯಾಜ್‌ಫಜಲ್‌ಔಟಾಗದೆ 55
ಇತರೆ: ( ಬೈ–1, ಲೆಗ್‌ಬೈ–1, ವೈಡ್–6) 08
ಬೌಲಿಂಗ್: ಡೊನಾಲ್ಡ್‌ತಿರಿಪನೊ 5–1–15–0, ನೆವಿಲ್ಲೆ ಮಾಡ್ಜಿವಾ 5–0–25–0, ತವಂದಾ ಮುಪರಿವಾ 6–0–43–0, ಗ್ರೆಮ್‌ಕ್ರೆಮರ್ 4–0–26–0, ಚಾಮು ಸಿಬಂದಾ 1.5–0–15–0.
ಫಲಿತಾಂಶ: ಭಾರತಕ್ಕೆ 10 ವಿಕೆಟ್‌ಜಯ.
ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ಬೂಮ್ರಾ.
ಸರಣಿ ಶ್ರೇಷ್ಠ: ಕೆ.ಎಲ್. ರಾಹುಲ್.
Comments are closed.