ನವದೆಹಲಿ: ಸದಾಕಾಲ ವಿವಾದದಲ್ಲೇ ಮುಳುಗಿರುವ ಬಿಗ್ ಬಾಸ್ ಖ್ಯಾತಿಯ ನಟಿ ಪೂಜಾ ಮಿಶ್ರಾ ತನ್ನ ಮೇಲೆ ಇತ್ತೀಚೆಗಷ್ಟೇ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಹೇಳಿಕೊಂಡಿದ್ದು, ಈ ಬಗ್ಗೆ ಪೊಲೀಸರ ಬಳಿ ದೂರನ್ನು ದಾಖಲಿಸಿದ್ದಾರೆ.
‘ಅಭಿ ತೋ ಪಾರ್ಟಿ ಶುರೂ ಹೀ ಹೈ’ ಕಾರ್ಯಕ್ರಮ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಇತ್ತೀಚೆಗಷ್ಟೇ ನಾನು ಜೈಪುರದಲ್ಲಿ ಫೋಟೋ ಶೂಟ್ ತೆರಳಿದ್ದೆ. ಫೋಟೋ ಶೂಟ್ ಗಾಗಿ ಮೂವರು ಛಾಯಾಗ್ರಾಹಕರನ್ನು ಗೊತ್ತುಪಡಿಸಿಕೊಂಡಿದ್ದೆ.
ಶೂಟ್ ವೇಳೆ ಮೂವರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದರೆಂದು ಹೇಳಿಕೊಂಡಿದ್ದಾರೆ. ಇನ್ನು ಪೂಜಾ ಮಿಶ್ರಾ ಅವರು ಅನುಭವಿಸಿರುವ ಲೈಂಗಿಕ ಕಿರುಕುಳ ಹಾಗೂ ಶೋಷಣೆ ಕುರಿತಂತೆ ಅಮಾರುಜಲ ಡಾಟ್ ಕಾಮ್ ಎಂಬ ವೆಬ್ ಸೈಟ್ ವರದಿ ಮಾಡಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತಂತೆ ಈಗಾಗಲೇ ಪೂಜಾ ಮಿಶ್ರಾ ಪೊಲೀಸರಿಗೆ ದೂರು ನೀಡಿದ್ದು, ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
Comments are closed.