
ಮುಜಾಫರ್ಪುರ: ಮುಜಾಫರ್ಪುರದಲ್ಲಿರುವ ಭೀಮಾರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ 2013-2016 ಸಾಲಿನಲ್ಲಿ 30 ವಿದ್ಯಾರ್ಥಿಗಳು ಬರೆದಿದ್ದ ಬಿಸಿಎ ಪರೀಕ್ಷೆಗಳ ಉತ್ತರ ಪತ್ರಿಕೆಯಲ್ಲಿ ಪರೀಕ್ಷಾರ್ಥಿಯ ಉತ್ತರ ಪತ್ರಿಕೆ ಖಾಲಿ ಖಾಲಿಯಾಗಿದ್ದರೂ ಪಾಸ್ ಮಾರ್ಕ್ಸ್ ನೀಡಿರುವ ಅಂಶ ಬೆಳಕಿಗೆ ಬಂದಿದೆ. ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳು ನೀಡಿದ ದೂರನ್ನು ಪರಿಶೀಲಿಸಿ ನಡೆಸಿದ ತನಿಖೆಯಲ್ಲಿ ಈ ಪ್ರಕರಣ ಬಯಲಾಗಿದೆ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ಪರೀಕ್ಷಾ ನಿಂಯತ್ರಕ ಸತೀಶ್ ಕುಮಾರ್ ರಾಯ್ ಹೇಳಿದ್ದಾರೆ.
ಅಂಕ ಪರಿಶೀಲನೆಗೆ ಉತ್ತರ ಪತ್ರಿಕೆಗಳ ಪ್ರತಿಯನ್ನು ತೆಗೆಯುವಾಗ ಮೋತಿಹಾರಿ ಎಲ್ಎನ್ಡಿ ಕಾಲೇಜಿನ 30 ಉತ್ತರ ಪತ್ರಿಕೆಗಳಲ್ಲಿ ಒಂದೇ ಒಂದು ಅಕ್ಷರ ಕಂಡು ಬಂದಿಲ್ಲ. ಆದರೆ ಪಾಸ್ ಮಾರ್ಕ್ಸ್ ನೀಡಲಾಗಿತ್ತು ಎಂದು ಇತರ ಕಾಲೇಜು ವಿದ್ಯಾರ್ಥಿಗಳು ದೂರಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಖಾಲಿ ಉತ್ತರ ಪತ್ರಿಕೆಗಳಿಗೆ ಮಾರ್ಕ್ಸ್ ನೀಡುವುದು ಇದೇ ಮೊದಲೇನಲ್ಲ. ಕಳೆದ ವರ್ಷ ನಡೆದ ಹೋಮಿಯೋಪತಿ ಪರೀಕ್ಷೆಯಲ್ಲೂ 40 ಖಾಲಿ ಉತ್ತರ ಪತ್ರಿಕೆಗಳಿಗೆ ಮಾರ್ಕ್ಸ್ ನೀಡಲಾಗಿತ್ತು.
Comments are closed.