ರಾಷ್ಟ್ರೀಯ

ತೆಲಂಗಾಣದಲ್ಲಿ ಹೈಕೋರ್ಟ್‌ ವಿಭಜನೆಗಾಗಿ ತೀವ್ರಗೊಂಡ ನ್ಯಾಯಾಂಗ ಹೋರಾಟ

Pinterest LinkedIn Tumblr

courtಹೈದರಾಬಾದ್‌: ಆಂಧ್ರ-ತೆಲಂಗಾಣ ರಾಜ್ಯ ವಿಭಜನೆ ನಂತರ ಹೈಕೋರ್ಟ್‌ ವಿಭಜನೆಗಾಗಿ ಹೋರಾಟ ತೀವ್ರಗೊಂಡಿದೆ.

ನ್ಯಾಯಾಂಗ ಇಲಾಖೆ ನೇಮಕಾತಿಯಲ್ಲಿ ಪಕ್ಷಪಾತ ಹಾಗೂ ಉಚ್ಚ ನ್ಯಾಯಾಲಯದ ವಿಭಜನೆಗೆ ಕೇಂದ್ರದ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಇನ್ನೂ 9 ನ್ಯಾಯಾಧೀಶರನ್ನು ಮಂಗಳವಾರ ಶಿಸ್ತು ಕ್ರಮದಡಿ ಸೇವೆಯಿಂದ ಅಮಾನತುಗೊಳಸಿಲಾಗಿದೆ. ಇದರೊಂದಿಗೆ ಅಮಾನಾತಾದ ನ್ಯಾಯಾಧೀಶರ ಸಂಖ್ಯೆ 11ಕ್ಕೆ ಏರಿದೆ.

ಈ ಮಧ್ಯೆ, ನ್ಯಾಯಾಧೀಶರ ಅಮಾನತು ಕ್ರಮವನ್ನು ಖಂಡಿಸಿ ತೆಲಂಗಾಣದ 200 ನ್ಯಾಯಾಧೀಶರು 15 ದಿನಗಳ ಸಾಮೂಹಿಕ ರಜೆ ಘೋಷಿಸಿದ್ದು, ಬುಧವಾರ ‘ಹೈಕೋರ್ಟ್‌ ಚಲೋ’ ಹಾಗೂ ‘ಹೈಕೋರ್ಟ್‌ ಬಂದ್‌’ ಚಳವಳಿಗೆ ಕರೆ ನೀಡಿದ್ದಾರೆ.

ಕಳೆದ ಭಾನುವಾರ 100ಕ್ಕೂ ಹೆಚ್ಚು ನ್ಯಾಯಾಧೀಶರು ‘ತೆಲಂಗಾಣ ನ್ಯಾಯಾಧೀಶರ ಸಂಘ’ದ ಹೆಸರಿನಲ್ಲಿ ರಾಜಭವನಕ್ಕೆ ಪ್ರತಿಭಟನಾ ರಾರ‍ಯಲಿ ಕೈಗೊಂಡಿದ್ದರು. ರಾಜ್ಯಪಾಲರಿಗೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿ, ಅವುಗಳ ಶೀಘ್ರ ಈಡೇರಿಕೆಗೆ ಕೇಂದ್ರಕ್ಕೆ ಸೂಚಿಸುವಂತೆ ಮನವಿ ಮಾಡಿದ್ದರು. ನ್ಯಾಯಾಧೀಶರ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ.

Comments are closed.