ಹೊಸದಿಲ್ಲಿ : ಕೇಂದ್ರ ಸಚಿವ ಸಂಪುಟ ಇಂದು ಬುಧವಾರ ಮಾದರಿ ಮಳಿಗೆ ಮತ್ತು ಸಂಸ್ಥೆ ಕಾಯಿದೆಗೆ ಅನುಮೋದನೆ ನೀಡಿದೆ. ಇದರ ಪರಿಣಾವಾಗಿ ಈಗಿನ್ನು ಬ್ಯಾಂಕುಗಳು, ಮಳಿಗೆಗಳು, ಚಿಲ್ಲರೆ ವ್ಯವಹಾರದ ಅಂಗಡಿಗಳು, ಮಾಲ್‌ಗಳು ವಾರದ ಏಳು ದಿನವೂ, ದಿನದ 24 ತಾಸುಗಳ ಕಾಲವೂ ತೆರೆದುಕೊಂಡಿರಬಹುದಾಗಿದೆ.
ಈ ಮಾದರಿ ಕಾಯಿದೆಯಿಂದಾಗಿ ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿನ್ನು ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಏಕರೂಪದ ನೀತಿ – ನಿಮಯಗಳನ್ನು ಜಾರಿಗೆ ತರಬಹುದಾಗಿದೆ. ಈಗ ವಾಣಿಜ್ಯ ವ್ಯಾಪಾರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಅವುಗಳನ್ನು ದಿನದ ಹೊತ್ತಿನಲ್ಲಿ ತೆರೆಯುವ, ಮುಚ್ಚುವ, ರಜೆ ಘೋಷಿಸುವ, ಕೆಲಸದ ಪಾಳಿಗಳನ್ನು ನಿಗದಿಸುವುದಕ್ಕೆ ಆಯಾ ರಾಜ್ಯಗಳಲ್ಲಿ ಪ್ರತ್ಯೇಕ ನಿಯಮಗಳಿವೆ. ರಾಜ್ಯ ಸರಕಾರಗಳು ಈ ಬಗ್ಗೆ ತಮ್ಮದೇ ಆದ ಶಾಸನಗಳನ್ನು ಹೊಂದಿವೆ. ವಾಣಿಜ್ಯ ವ್ಯವಹಾರದ ಸಂಸ್ಥೆಗಳನ್ನು ದಿನದ ನಿರ್ದಿಷ್ಟ ಹೊತ್ತಿನಲ್ಲಿ ತೆರೆಯುವ ಮತ್ತು ಮುಚ್ಚವುದಕ್ಕೆ ಸಂಬಂಧಿಸಿದಂತೆ ಕ್ಲಿಷ್ಟಕರ ಕಾಯಿದೆಗಳು ಇರುವುದನ್ನು ಕೇಂದ್ರ ಸರಕಾರವು ಗಮಿನಿಸಿದೆ.
ಮಾತ್ರವಲ್ಲದೆ ಮಹಿಳೆಯರನ್ನು ದುಡಿಸಿಕೊಳ್ಳುವ ವಿಷಯದಲ್ಲೂ ಏಕ ಪ್ರಕಾರದ ನೀತಿ – ನಿಯಮಗಳು ಇಲ್ಲದಿರುವುದು, ವಾರ್ಷಿಕ ವಾಣಿಜ್ಯ ಪರವಾನಿಗೆ ನೀಡುವಲ್ಲಿ ಏಕರೂಪತೆ ಇಲ್ಲದಿರುವುದು, ಶಾಸನಾತ್ಮಕ ದಾಖಲೆಗಳನ್ನು ಇರಿಸಿಕೊಳ್ಳುವಲ್ಲಿ ನಿರ್ದಿಷ್ಟತೆ ಇಲ್ಲದಿರುವುದನ್ನು ಕೂಡ ಕೇಂದ್ರ ಸರಕಾರ ಗಮಿನಿಸಿದೆ.
ಅಂತೆಯೇ ಈ ಎಲ್ಲ ವಿಷಯದಲ್ಲಿ ಏಕರೂಪತೆಯನ್ನು ತರುವ ಸಲುವಾಗಿ ಕೇಂದ್ರ ಸಚಿವ ಸಂಪುಟ ಇಂದು ಮಾದರಿ ವಾಣಿಜ್ಯ ಮಳಿಗೆ ಮತ್ತು ಸಂಸ್ಥೆಗಳ ಕಾಯಿದೆಗೆ ಅನುಮೋದನೆ ನೀಡಿದೆ.
-ಉದಯವಾಣಿ
Comments are closed.