ಅಂತರಾಷ್ಟ್ರೀಯ

2 ಗಂಟೆಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ!

Pinterest LinkedIn Tumblr

cancer

ಹಾಸ್ಟನ್: 2 ಗಂಟೆಗಳಲ್ಲಿ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಬಲ್ಲ ನೂತನ ವಿಧಾನವನ್ನು ಸಂಶೋಧಕರು ಕಂಡು ಹಿಡಿದಿದ್ದು, ಇದನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹತ್ವದ ಬೆಳವಣಿಗೆ ಎಂದೇ ಪರಿಗಣಿಸಲಾಗುತ್ತಿದೆ.

ಈ ವಿಧಾನದಲ್ಲಿ ನೈಟ್ರೋಬೆನ್ಸಲ್ಡೆಹೈಡ್ ಎಂಬ ರಾಸಾಯನಿಕವನ್ನು ಟ್ಯೂಮರ್ಗೆ ಇಂಜೆಕ್ಟ್ ಮಾಡಲಾಗುತ್ತಿದೆ. ಇದರಿಂದ ಕ್ಯಾನ್ಸರ್ ಕೋಶಗಳು ನಾಶವಾಗುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಚಿಕಿತ್ಸಾ ವಿಧಾನ ಮಕ್ಕಳಿಗೆ ಇನ್ನಷ್ಟು ಪೂರಕವಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.

ಟೆಕ್ಸಾಸ್ ವಿವಿಯ ಪ್ರೊಫೆಸರ್ ಮ್ಯಾಥ್ಯು ಗ್ಡೋವಿನ್ ಅಭಿವೃದ್ಧಿಪಡಿಸಿದ್ದಾರೆ. ಗ್ಡೋವಿನ್ ಪ್ರಕಾರ ಕೇವಲ 2 ಗಂಟೆಗಳ ಅವಧಿಯಲ್ಲಿ ಶೇ. 95 ಕ್ಯಾನ್ಸರ್ ಕೋಶಗಳು ನಾಶವಾಗುತ್ತವೆ. ಈ ಚಿಕಿತ್ಸಾ ವಿಧಾನ ಟ್ರಿಪಲ್ ನೆಗೆಟಿವ್ ಬ್ರೆಸ್ಟ್ ಕ್ಯಾನ್ಸರ್ ಮೇಲೂ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಹೊಸ ಚಿಕಿತ್ಸಾ ವಿಧಾನ ಕಿಮೋಥೆರಪಿಗಿಂತ ಭಿನ್ನವಾಗಿದೆ. ಕಿಮೋಥೆರಪಿ ಮಾನವನ ದೇಹದಲ್ಲಿರುವ ಎಲ್ಲ ಕೋಶಗಳ ಮೇಲೆ ಪ್ರಭಾವ ಬೀರುತ್ತದೆ ಇದರಿಂದ ಕೂದಲುದುರುವುದು, ನಿಶಕ್ತಿಯಿಂದ ರೋಗಿಗಳು ಬಳಲುತ್ತಾರೆ. ಆದರೆ ನೂತನ ವಿಧಾನದಲ್ಲಿ ಕ್ಯಾನ್ಸರ್ ಕೋಶಗಳ ಮೇಲೆ ಮಾತ್ರ ಪ್ರಭಾವ ಬೀರಲಿದ್ದು, ಬೇರಾವ ಕೋಶಕ್ಕೂ ಹಾನಿಯಾಗುವುದಿಲ್ಲ ಎಂದಿದ್ದಾರೆ.

Comments are closed.