ರಾಷ್ಟ್ರೀಯ

ತನ್ನಿಂದ ದೂರವಾದಳೆಂಬ ಕಾರಣಕ್ಕೆ ಪೋರ್ನ್‌ ಸೈಟ್‌ಗೆ ಮಾಜಿ ಗೆಳತಿಯ ವೀಡಿಯೋ ಅಪ್‌ಲೋಡ್‌ ಮಾಡಿದ ! ಮುಂದೆ ಏನಾಯಿತು…?

Pinterest LinkedIn Tumblr

po

ತನ್ನಿಂದ ದೂರವಾದಳೆಂಬ ಕಾರಣಕ್ಕೆ ಪೋರ್ನ್‌ ಸೈಟ್‌ಗೆ ಮಾಜಿ ಗೆಳತಿಯ ವೀಡಿಯೋ ಅಪ್‌ಲೋಡ್‌ ಮಾಡಿದ ! ಮುಂದೆ ಏನಾಯಿತು…?

ಸೇಡಿಗಾಗಿ ಈ ಕೃತ್ಯ ಎಸಗಿರುವ ಬಿ.ರೂಪೇಶ್‌ (27)ಜತೆ ‘ಶೀ ಟೀಂ’ ಶನಿವಾರ ಸಮಾಲೋಚನೆ ನಡೆಸಿದೆ. ಮಾಜಿ ಗೆಳತಿಯ ಗಂಡನ ಮನೆಯವರಿಗೆ ವೀಡಿಯೋದ ಸಿಡಿಯನ್ನು ರೂಪೇಶ್‌ ಪೋಸ್ಟ್‌ ಮಾಡಿದ್ದ ಎಂದು ತಿಳಿದುಬಂದಿದೆ.

ಗುಂಟೂರು ಜಿಲ್ಲೆಯ ತಡೆಪಲ್ಲಿಯ ರೂಪೇಶ್‌ ಹಾಗೂ ಸಂತ್ರಸ್ತೆ ಎಂಜಿನಿಯರಿಂಗ್‌ ಕಾಲೇಜಿನ ಸಹ ಪಾಠಿಗಳಾಗಿದ್ದರು. ಇಬ್ಬರ ನಡುವೆ ಪ್ರೇಮಾಂಕುರವಾಗಿ ಇಬ್ಬರು ಮದುವೆ ಆಗ ಬಯಸಿದ್ದರು. ಆದರೆ, ರೂಪೇಶ್ ವರ್ತನೆಯಿಂದ ಬೇಸತ್ತ ಯುವತಿ ಸಂಬಂಧದಿಂದ ಹೊರಬರಲು ನಿರ್ಧರಿಸಿದ್ದಳು. ನಂತರ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಮತ್ತೊಬ್ಬನನ್ನು ಮದುವೆ ಆಗಿದ್ದಳು.

ಯುವತಿಯ ನಿರ್ಧಾರದಿಂದ ರೊಚ್ಚಿಗೆದ್ದಿದ್ದ ರೂಪೇಶ್‌, ಹಿಂದೆ ಅವರಿಬ್ಬರು ಆತ್ಮೀಯವಾಗಿ ಕಳೆದಿದ್ದ ವೀಡಿಯೋಗಳನ್ನು ಪೋರ್ನ್‌ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿ, ಆಕೆಯ ಅತ್ತೆ ಮಾವನಿಗೆ ಆ ವೀಡಿಯೋದ ಸಿಡಿ ಕಳುಹಿಸಿದ್ದ.

ಪೋರ್ನ್‌ ಸೈಟ್‌ನಲ್ಲಿ ವೀಡಿಯೋ ನೋಡಿದ ಸಂತ್ರಸ್ತೆಯ ಕುಟುಂಬದವರು ‘ಶೀ ಟೀಂ’ ಸಂಪರ್ಕಿಸಿದ್ದರು. ನಂತರ ಪ್ರಕರಣವನ್ನು ಸೈಬರ್‌ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಯಿತು. ನಾಲ್ಕು ದಿನಗಳ ಹಿಂದೆ ಬಂಧಿತನಾಗಿದ್ದ ರೂಪೇಶ್‌ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ. ನಂತರ ಪೋಷಕರ ಸಮ್ಮುಖದಲ್ಲಿ ಜತೆ ಸಮಾಲೋಚನೆ ನಡೆಸಲಾಗಿದೆ. ಪೋರ್ನ್‌ ಸೈಟ್‌ನಲ್ಲಿದ್ದ ವೀಡೀಯೊವನ್ನು ಪೊಲೀಸರು ತೆಗೆದುಹಾಕಿದ್ದಾರೆ.

Comments are closed.