ಪಾಟ್ನ(ಬಿಹಾರ): ದೇಶ ವಿರೋಧಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯನ್ನು ಜೈಲಿನಲ್ಲಿ ಕೂರಿಸುವಂತೆ ಜೆಡಿ(ಯು) ಭಾನುವಾರ ಆಗ್ರಹಿಸಿದೆ.
ಹೈದರಾಬಾದ್ ನಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರಿಗೆ ಕಾನೂನು ನೆರವು ನೀಡುವುದಾಗಿ ಹೇಳುತ್ತಿರುವ ಓವೈಸಿಯನ್ನು ಕಂಬಿ ಹಿಂದೆ ಕೂರಿಸುವಂತೆ ಜೆಡಿಯು ನಾಯಕ ಅಜಯ್ ಅಲೋಕ್ ಅವರು ಹೇಳಿದ್ದಾರೆ.
ಪ್ರತೀ ರಾಜ್ಯದಲ್ಲೂ ಏಕರೂಪ ನಾಗರಿಕ ಸಂಹಿತೆ ಎಂಬುದಿರುತ್ತದೆ. ಹಾಗೆಂದ ಮಾತ್ರಕ್ಕೆ ಆ ರಾಜ್ಯವನ್ನು ಹಿಂದೂ ಅಥವಾ ಕ್ಯಾಥೋಲಿಕ್ ರಾಜ್ಯವಾಗಿ ಮಾಡಲಾಗುತ್ತದೆಯೇ? ಇಂತಹ ನಿಲುವು ರಾಜ್ಯವನ್ನು ಇಸಿಸ್ ರಾಜ್ಯವಾಗಿ ಮಾರ್ಪಾಡಾಗುವಂತೆ ಮಾಡುತ್ತದೆ ಎಂದು ಓವೈಸಿ ಹೇಳಿಕೊಂಡಿದ್ದರು.
ಈ ಹೇಳಿಕೆ ವಿರುದ್ಧ ಕಿಡಿಕಾರಿರುವ ಅಜಯ್ ಅಲೋಕ್ ಅವರು, ಓವೈಸಿಯೊಬ್ಬ ದೊಡ್ಡ ರಾಷ್ಟ್ರ ವಿರೋಧಿ. ಬಂಧಿತ ಉಗ್ರರಿಗೆ ಕಾನೂನು ನೆರವು ನೀಡುವುದಾಗಿ ಹೇಳಿಕೊಂಡಿದ್ದಾರೆ. ಇಂತಹ ವ್ಯಕ್ತಿಯನ್ನು ಕಂಬಿ ಹಿಂದೆ ಕೂರಿಸಿ ಸಂಸತ್ತಿನ ಸದಸ್ಯತ್ವ ಸ್ಥಾನವನ್ನು ರದ್ದುಪಡಿಸಬೇಕೆಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಹೈದರಾಬಾದ್ ನಲ್ಲಿ ಬಂಧಿತರಾಗಿರುವ ಉಗ್ರರ ಕುರಿತಂತೆ ಹೇಳಿಕೆ ನೀಡಿದ್ದ ಓವೈಸಿಯವರು, ಬಂಧಿತರಾಗಿರುವ ಶಂಕಿತ ಉಗ್ರರಿಗೆ ಹೇಗಿದ್ದರೂ ಕಾನೂನು ವ್ಯವಸ್ಥೆ ಕಾನೂನಾತ್ಮಕ ಸಹಾಯವನ್ನು ನೀಡುತ್ತದೆ. ಹೀಗಾಗಿ ನಮ್ಮ ಪಕ್ಷವೇ ಬಂಧಿತ ಉಗ್ರರಿಗೆ ಕಾನೂನಾತ್ಮಕ ನೆರವು ನೀಡಲಿದೆ ಎಂದು ಹೇಳಿದ್ದರು.
ಬಂಧಿತ ಶಂಕಿತ ಉಗ್ರರ ಕುಟುಂಬಸ್ಥರು ಕೆಲವು ದಿನಗಳ ಹಿಂದಷ್ಟೇ ಓವೈಸಿಯವರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ನಮ್ಮ ಮಕ್ಕಳು ಮುಗ್ಧರಾಗಿದ್ದು, ಅವರಿಗೂ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಓವೈಸಿ ಈ ರೀತಿಯಾಗಿ ಹೇಳಿ ನೀಡಿದ್ದಾರೆಂದು ಹೇಳಲಾಗುತ್ತಿದೆ.
Comments are closed.