ಹೈದ್ರಾಬಾದ್: ಇವರೆಗೂ ಗ್ಲಾಮರ್ ಪಾತ್ರದಲ್ಲಿ, ಪ್ರತಿಭೆಗೆ ಅವಕಾಶವಿರುವ ಪಾತ್ರಗಳ ಮೂಲಕ ಹೆಸರು ಗಳಿಸಿದ್ದ ತಾರೆ ನಯನತಾರ. ಸಿನಿಮಾ ಅಲ್ಲದೆ ವೈಯುಕ್ತಿಕ ಬದುಕಲ್ಲೂ ಸಹಿತ ಆಕೆಯು ಅನೇಕ ರೀತಿಯಲ್ಲಿ ಜನರಿಗೆ ಗೊತ್ತಾದ ಚೆಲುವೆ. ಎರಡು ಬಾರಿ ಪ್ರಣಯದಲ್ಲಿ ಸೋಲು, ಮದುವೆ ವಿಷಯದಲ್ಲಿ ನೋವು ಹೀಗೆ ಹಲವಾರು ಸಂಗತಿಗಳು ಅಲ್ಲದೇ ಆಕೆ ತನ್ನ ನಟನೆ, ಗೆಲುವಿನ ಮೂಲಕವೂ ಸಹಿತ ಹೆಚ್ಚು ಹೆಚ್ಚು ಪ್ರಚಲಿತದಲ್ಲಿರುವ ನಟಿ.
ಮಾಯಾ ಚಿತ್ರದ ಬಳಿಕ ಇದೀಗ ಮತ್ತೊಮ್ಮೆ ಭಯ ಪಡಿಸಲು ನಯನಾತಾರ ಬರುತ್ತಿದ್ದಾರೆ. ಆಕೆ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಯನಾತಾರಾ ಮತ್ತೆ ಹಾರರ್ ಚಿತ್ರದ ಮೂಲಕ ತೆರೆಗೆ ಬರಲಿದ್ದಾರೆ. ಮುಂಬರುವ ಮತ್ತೊಂದು ಹಾರರ್ ಚಿತ್ರದಲ್ಲಿ ನಯನತಾರಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
‘ಮಾಯಾ’ ಚಿತ್ರದ ಬಳಿಕ ನಯನತಾರಾ ಮತ್ತೊಂದು ಚಿತ್ರದ ಮೂಲಕ ಬಿಗ್ ಸ್ಕ್ರೀನ್ ಮೂಲಕ ಮಿಂಚಲಿದ್ದಾರೆ, ಮಾಯಾ ಎನ್ನುವ ಹೆಸರಿನ ಹಾರರ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಅಶ್ವಿನಿ ಶರವಣನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಭಾಷೆಯಲ್ಲಿ ಮಯೂರಿ ಹೆಸರಲ್ಲಿ ಆ ಚಿತ್ರವನ್ನು ಕೆ. ಕಲ್ಯಾಣ್ ಅವರು ಬಿಡುಗಡೆ ಮಾಡಿದ್ದರು.
ನಯನತಾರಾ ಅಭಿನಯಿಸಿದ್ದ ಮಾಯಾ ಟಾಲಿವುಡ್‌ನಲ್ಲಿ ಬಿಗ್ ಹಿಟ್ ನೀಡಿತ್ತು. ಮಾಯಾ ಚಿತ್ರದಿಂದ ಅಪಾರ ಪ್ರೇಕ್ಷಕರನ್ನು ಪಡೆದುಕೊಂಡಿದ್ದಲ್ಲದೇ, ಅತಿ ಹೆಚ್ಚು ಗಳಿಕೆ ಕಾಣುವ ಚಿತ್ರಗಳಲ್ಲಿ ಇದು ಕೂಡ ಒಂದಾಗಿತ್ತು.
ಇನ್ನೂ ಚಿತ್ರದಲ್ಲಿ ನಯನಾತಾರ ತಂದೆ ಪಾತ್ರದಲ್ಲಿ ತಂಬಿ ರಾಮಯ್ಯ ನಟಿಸುತ್ತಿದ್ದಾರೆ. ಹರ್ಷಾ ಉತ್ತನಮ್ ಸೈಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇನ್ನೂ ಈ ಚಿತ್ರದಲ್ಲಿ ವಿಕ್ರಂ,ನಯನತಾರಾ, ನಿತ್ಯಾ ಮೆನನ್ ಲೀಡ್ ರೋಲ್‌ನಲ್ಲಿದ್ದಾರೆ.
Comments are closed.