ರಾಷ್ಟ್ರೀಯ

ರಾಹುಲ್‌ ಗಾಂಧಿ ಮದುವೆ ಸುದ್ದಿಗೆ ಪ್ರತಿಕ್ರಿಯೆಗಳು…

Pinterest LinkedIn Tumblr

RahulGandhiಕೇಜ್ರಿವಾಲ್‌: ಇದು ನಿಜವೇ ಆಗಿದ್ದರೆ ನಿಜಕ್ಕೂ ಆಘಾತಕಾರಿ ವಿಚಾರ.
ಮಾಯಾವತಿ: ಬ್ರಾಹ್ಮಣ ಯುವತಿಯನ್ನು ಮದುವೆಯಾಗುತ್ತಿರುವುದು ಉತ್ತರ ಪ್ರದೇಶದ ಚುನಾವಣೆಯಲ್ಲಿ ಬ್ರಾಹ್ಮಣರ ಮತ ಸೆಳೆಯಲು ಹೂಡಿದ ತಂತ್ರ.
ದಿಗ್ವಿಜಯ ಸಿಂಗ್‌: ಇಂಥ ಸುಳ್ಳುಸುದ್ದಿ ಹಬ್ಬಿಸಲು ನಿಮಗೆಷ್ಟು ಧೈರ್ಯ!
ಬಿಜೆಪಿ ಕಾರ್ಯಕರ್ತ: ಹೌದು, ಸುಳ್ಳುಸುದ್ದಿ ಹಬ್ಬಿಸಲು ಅಧಿಕಾರ ಇರೋದು ದಿಗ್ವಿಜಯ್‌ ಮತ್ತು ಕೇಜ್ರಿವಾಲ್‌ ಗೆ ಮಾತ್ರ.
ಆಪ್‌: ಫೇಕು ಮೋದಿ ಭಕ್ತರೇ, ಎಲ್ಲದರಲ್ಲೂ ಕೇಜ್ರಿಯನ್ನೇಕೆ ಎಳೆದು ತರ್ತೀರಿ?
ಬಿಜೆಪಿ ಕಾರ್ಯಕರ್ತ: ಫೇಕು ಕೇಜ್ರಿ ಭಕ್ತರೇ, ಇದಕ್ಕೂ ಮೋದಿಗೂ ಏನು ಸಂಬಂಧ?
ರಾಹುಲ್‌: ನನ್ನ ಮದುವೆ ವದಂತಿ ಬಗ್ಗೆಯೂ ಬಿಜೆಪಿ-ಆಪ್‌ ಜಗಳ ಮಾಡ್ತಿವೆ. ನಮ್ಮವರು ಎಲ್ಲೋದ್ರು?
-ಉದಯವಾಣಿ

Comments are closed.