ನವದೆಹಲಿ: ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಯಲ್ಲಿರುವ ಪತ್ನಿ ಅಮೃತಾ ರೈ,ಪಿತ್ರಾರ್ಜಿತ ಮತ್ತು ನಾನು ಸಂಪಾದಿಸಿದ ಆಸ್ತಿಯನ್ನು ಪುತ್ರ ಜೈವರ್ಧನ್ ಸಿಂಗ್ ಅವರಿಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್, ಕಳೆದ 2014ರಲ್ಲಿ ಅಮೃತಾ ರೈ ಅವರೊಂದಿಗೆ ವೈವಾಹಿಕ ಸಂಬಂಧ ಹೊಂದಿರುವುದಾಗಿ ಬಹಿರಂಗಪಡಿಸಿದ್ದರು.ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿರುವುದಾಗಿ ಖಚಿತಪಡಿಸಿದ್ದರು.
ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ಅಮೃತಾ ರೈ ಪೋಸ್ಟ್ ಮಾಡಿ, ನಾನು ಮತ್ತು ದಿಗ್ವಿಜಯ್ ಸಿಂಗ್ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದು, ನಂತರ ವಿವಾಹವನ್ನು ನೋಂದಣಿ ಮಾಡಿಸಿದ್ದೇವೆ ಎನ್ನುವ ಸಂದೇಶ ಬಹಿರಂಗಪಡಿಸಿದ್ದರು.
ಅಮೃತಾ ರೈ ರಾಜ್ಯಸಭಾ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಕೇವಲ ಪ್ರೀತಿಗಾಗಿ ನಾನು ದಿಗ್ವಿಜಯ್ ಸಿಂಗ್ ಅವರನ್ನು ವಿವಾಹವಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ, ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿಯನ್ನು ಪುತ್ರ ಮತ್ತು ಪುತ್ರಿಗೆ ಹಸ್ತಾಂತರಿಸುವಂತೆ ಪತಿ ದಿಗ್ವಿಜಯ್ ಸಿಂಗ್‌ಗೆ ಮನವಿ ಮಾಡಿದ್ದಾಗಿ ಪತ್ನಿ ಅಮೃತಾ ರೈ ತಿಳಿಸಿದ್ದಾರೆ.
Comments are closed.