ರಾಷ್ಟ್ರೀಯ

ಸ್ಮೃತಿ ಇರಾನಿ ಪದವಿ ವಿವಾದ: ದಾಖಲೆ ಒದಗಿಸುವಂತೆ ಚು.ಆಯೋಗಕ್ಕೆ ನ್ಯಾಯಾಲಯ ಸೂಚನೆ

Pinterest LinkedIn Tumblr

Smriti-Irani-m

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಪದವಿ ಕುರಿತ ದಾಖಲೆಗಳನ್ನು ನೀಡುವಂತೆ ದೆಹಲಿ ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಗುರುವಾರ ಸೂಚನೆ ನೀಡಿದೆ.

2004ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 1996ರಲ್ಲಿ ಬಿ.ಎ. ಪದವಿ ಪಡೆದಿರುವುದಾಗಿ ಇರಾನಿ ಅವರು ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಇದು ಸುಳ್ಳು ಮಾಹಿತಿಯಾಗಿದೆ ಎಂದು ಅಹ್ಮರ್ ಖಾನ್ ಅವರು ದೂರು ದಾಖಲಿಸಿದ್ದರು. ಇದರಂತೆ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಕೂಡ ಇರಾನಿ ಸಲ್ಲಿಸಿರುವ ದಾಖಲೆಗಳು ಸುಳ್ಳು ದಾಖಲೆಗಳಾಗಿವೆ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ದಾಖಲೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಮೆಟ್ರೊಪಾಲಿಟನ್‌ಮ್ಯಾಜಿಸ್ಟ್ರೇಟ್‌ಹರ್ವಿಂದರ್‌ಸಿಂಗ್‌ಅವರು ಸೂಚಿನೆ ನೀಡಿದ್ದಾರೆ.

Comments are closed.