ಹೊಸದಿಲ್ಲಿ : ಇದೇ ಪ್ರಪ್ರಥಮ ಬಾರಿಗೆ ಭಾರತ ಪ್ರತಿಷ್ಠೆಯ ಮಿಸ್ಟರ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಹೈದರಾಬಾದಿನ ರೋಹಿತ್ ಖಂಡೇಲ್‌ವಾಲಾ ಅವರು ಸೌತ್ ಪೋರ್ಟ್‌ನ ದಿ ಪ್ರೋಮನೇಡ್ ನಲ್ಲಿನ ಫ್ಲೋರಲ್ ಹಾಲ್‌ನ ಸೌತ್ ಪೋರ್ಟ್ ಥಿಯೇಟರ್‌ನಲ್ಲಿ ಕಿವಿಗಡ ಚಿಕ್ಕುವ ಚಪ್ಪಾಳೆಯ ನಡುವೆ ಪ್ರತಿಷ್ಠಿತ ಮಿಸ್ಟರ್ ವರ್ಲ್ಡ್ 2016 ಪ್ರಶಸ್ತಿಯನ್ನು ಗೆದ್ದುಕೊಂಡರು. ಜುಲೈ 19ರಂದು ಈ ಸ್ಪರ್ಧೆ ನಡೆದಿತ್ತು.
2016ರ ಮಿಸ್ಟರ್ ವರ್ಲ್ಡ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನಿಸುವ ಸಂದರ್ಭದ ಫೋಟೋಗಳನ್ನು ಪೋಸ್ಟ್ ಮಾಡಿದೆ.
ಟಿಓಐ ಡಾಟ್ ಕಾಮ್ ಪ್ರಕಾರ ಮಿಸ್ಟರ್ ವರ್ಲ್ಡ್ ಪ್ರಶಸ್ತಿಗೆ 47 ಮಂದಿ ಸ್ಪರ್ಧಿಗಳಿದ್ದರು. ಪ್ರಶಸ್ತಿಯನ್ನು ಗೆದ್ದುಕೊಂಡ ರೋಹಿತ್ ಅವರಿಗೆ ನಗದು ಬಹುಮಾನವಾಗಿ 50,000 ಡಾಲರ್ ನೀಡಲಾಯಿತು. ನಿವೇದಿತ ಸಾಬೂ ಅವರು ವಿನ್ಯಾಸಗೊಳಿಸಿದ್ದ ಟುಕ್ಸೆಡೋ ಪೋಷಾಕು ಧರಿಸಿದ್ದರು.
-ಉದಯವಾಣಿ
Comments are closed.