ದರ್ಭಂಗಾ: ಬ್ಲ್ಯಾಕ್‌ಮ್ಯಾಜಿಕ್ ಮಾಡುತ್ತಿದ್ದಾಳೆ ಎಂದು ಆರೋಪಿಸಿ ದಲಿತ ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳು ಆಕೆಗೆ ಮೂತ್ರ ಕುಡಿಸಿದ ಹೇಯ ಘಟನೆ ವರದಿಯಾಗಿದೆ.
ಬಿಹಾರ್‌ನ ದರ್ಭಾಂಗ್ ಜಿಲ್ಲೆಯ ಪಿಪ್ರಾ ಗ್ರಾಮದಲ್ಲಿ ನಾಲ್ವರು ಆರೋಪಿಗಳು, ದಲಿತ ಮಹಿಳೆ ಬ್ಲ್ಯಾಕ್‌ಮ್ಯಾಜಿಕ್ ಮಾಡುತ್ತಾಳೆ ಎನ್ನುವ ಆರೋಪ ಹೊರಿಸಿ ಆಕೆಗೆ ಮೂತ್ರ ಕುಡಿಸಿ ಕಿರುಕುಳ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಂಜನಿ ಕುಮಾರ್ ತಿಳಿಸಿದ್ದಾರೆ.
ಘಟನೆಯ ನಂತರ ಗ್ರಾಮವನ್ನು ತೊರೆದ ಮಹಿಳೆ, ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ದೂರು ದಾಖಲಿಸಿದ್ದಾಳೆ.
ಗ್ರಾಮದಲ್ಲಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಹಿಂದೆ ಮಾಂತ್ರಿಕಳಾಗಿರುವ ದಲಿತ ಮಹಿಳೆಯ ಕೈವಾಡವಿರಬಹುದು ಎಂದು ಶಂಕಿಸಿದ ಕೆಲ ಗ್ರಾಮಸ್ಥರು, ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.