ನವದೆಹಲಿ: ವಿವಾದಿತ ಬೋಧಕ (ಮೌಲ್ವಿ) ಜಾಕೀರ್ ನಾಯಕ್ ಧರ್ಮಬೋಧನೆಯಿಂದಲೇ ಉಗ್ರವಾದಕ್ಕೆ ಸ್ಪೂರ್ತಿ ದೊರೆಯಿತು ಎಂದು ದೇಶಾದ್ಯಂತ ಕಳೆದ 10 ವರ್ಷಗಳಲ್ಲಿ ಬಂಧಿತರಾಗಿರುವ ಸುಮಾರು 55 ಉಗ್ರರು ಬಾಯ್ಬಿಟ್ಟಿದ್ದಾರೆ.
ಲಷ್ಕರ್. ಸಿಮಿ, ಇಸ್ಲಾಮಿಕ್ ಸ್ಟೇಟ್, ಇಂಡಿಯನ್ ಮುಜಾಹಿದೀನ್ನಂತಹ ನಿಷೇಧಿತ ಉಗ್ರ ಸಂಘಟನೆಗಳ ಬಂಧಿತ ಉಗ್ರರು ವಿಚಾರಣೆ ವೇಳೆ ತಾವು ಜಾಕೀರ್ ನಾಯಕ್ ಭಾಷಣದಿಂದಲೇ ಪ್ರೇರೇಪಿತರಾಗಿರುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಬಾಂಗ್ಲಾದ ಢಾಕಾ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ 20 ಜನರನ್ನು ಬಲಿಪಡೆದ ಬಾಂಗ್ಲಾ ಉಗ್ರರು ಪೀಸ್ ಟಿ ವಿ ಯಲ್ಲಿ ಜಾಕೀರ್ ನಡೆಸಿಕೊಡುವ ಕಾರ್ಯಕ್ರಮದಿಂದ ಪ್ರಚೋದನೆ ಪಡೆದೇ ಉಗ್ರರಾಗಿದ್ದರು ಎಂಬ ವಿಷಯ ತನಿಖೆ ವೇಳೆ ಹೊರಬಿದ್ದಿತ್ತು. ವಿವಿಧ ಆರೋಪಗಳ ಮೇಲೆ ಜಾಕೀರ್ ವಿರುದ್ಧ 3 ಎಫ್ಐಆರ್ ದಾಖಲಾಗಿತ್ತು, ಅದರಲ್ಲಿ ಇನ್ನು ಒಂದು ಪ್ರಕರಣ ವಿಚಾರಣೆಗೆ ಬಾಕಿ ಇದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಾಕೀರ್ ಮಾಧ್ಯಮಗಳು ಮಾತ್ರ ತಮ್ಮ ವಿರುದ್ಧ ಸುದ್ದಿ ಬಿತ್ತರಿಸುತ್ತಿವೆ, ಸರ್ಕಾರದಿಂದ ಈವರೆಗೂ ಯಾವುದೇ ವಿಚಾರಣೆಗೆ ಕರೆದಿಲ್ಲ. ತಮ್ಮ ವಿರುದ್ಧ ಮಾಧ್ಯಮಗಳು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರತಿಪಾದಿಸಿದ್ದರು.
Comments are closed.