ರಾಷ್ಟ್ರೀಯ

ಕೇರಳದ ಯುವಕರೊಂದಿಗೆ ಸಂಪರ್ಕ, ಬಿಹಾರದ ಮಹಿಳೆ ಬಂಧನ

Pinterest LinkedIn Tumblr

1-Terrorist-webನವದೆಹಲಿ: ಕೇರಳದಿಂದ ನಾಪತ್ತೆಯಾಗಿರುವ 21 ಯುವಕ, ಯುವತಿಯರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಿಹಾರದ ಮಹಿಳೆಯೊಬ್ಬರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಬಿಹಾರದ 28 ವರ್ಷದ ಯಾಸ್ಮಿನ್ ಮೊಹಮ್ಮದ್ ಎಂಬ ಮಹಿಳೆ ತನ್ನ 4 ವರ್ಷದ ಮಗನೊಂದಿಗೆ ಆಫ್ಘಾನಿಸ್ತಾನದ ಕಾಬೂಲ್ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆಕೆ ಕಾಬೂಲ್ ಮೂಲಕ ಕೇರಳದಿಂದ ನಾಪತ್ತೆಯಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳಿದ್ದಾರೆ ಎನ್ನಲಾಗುತ್ತಿರುವ ಯುವಕರನ್ನು ಭೇಟಿ ಮಾಡಲು ತೆರಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಯ ಯಾಸ್ಮಿನ್ನನ್ನು ಬಂಧಿಸಿ ನಂತರ ಆಕೆಯನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಕೇರಳ ಪೊಲೀಸರ ತಂಡ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಕೇರಳ ಯುವಕರ ನಾಪತ್ತೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಬ್ದುಲ್ ರಷೀದ್ ಎಂಬಾತನೊಂದಿಗೆ ಯಾಸ್ಮಿನ್ ಸಂಪರ್ಕ ಹೊಂದಿದ್ದಳು. ಜತೆಗೆ ಆಕೆ 2013-14ರಲ್ಲಿ ಕೊಟ್ಟಕಲ್ ಮತ್ತು ಕೊಲ್ಲಮ್ ನಲ್ಲಿರುವ ಪೀಸ್ ಅಂತಾರಾಷ್ಟ್ರೀಯ ಸ್ಕೂಲ್ನಲ್ಲಿ ಕೆಲಸ ಮಾಡಿದ್ದಳು. ರಷೀದ್ ಆಫ್ಘಾನಿಸ್ತಾನದಿಂದ ಯಾಸ್ಮಿನ್ಗೆ ಸಂದೇಶ ಕಳುಹಿಸಿ ಕಾಬೂಲ್ಗೆ ಬರುವಂತೆ ತಿಳಿಸಿದ್ದ. ಅದರಂತೆ ಆಕೆ ಕಾಬೂಲ್ಗೆ ತೆರಳುತ್ತಿದ್ದಳು. ಈಕೆ ಕೇರಳದ ಯುವಕರೊಂದಿಗೆ ದೇಶ ತೊರೆಯಲು ನಿರ್ಧರಿಸಿದ್ದಳು. ಆದರೆ ಕೆಲವೊಂದು ದಾಖಲೆಗಳು ಆ ಸಮಯದಲ್ಲಿ ಲಭ್ಯವಿರದ ಕಾರಣ ಆಕೆ ತಡವಾಗಿ ಪ್ರಯಾಣಿಸಲು ನಿರ್ಧರಿಸಿದ್ದಳು ಎಂದು ಮೂಲಗಳು ತಿಳಿಸಿವೆ.

Comments are closed.