ಅಹಮ್ಮದಾಬಾದ್: ಗುಜರಾತ್ ಸಿಎಂ ಆನಂದಿಬೆನ್ ಅವರು ಸೋಮವಾರ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ತನಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಲು ಸಿದ್ಧಳಾಗಿದ್ದೇನೆ ಎಂದು ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಇಚ್ಚೆಯನ್ನು ವ್ಯಕ್ತಪಡಿಸಿ
ಈ ವರ್ಷದ ನವೆಂಬರ್ ಗೆ 75 ವರ್ಷ ತುಂಬಲಿದ್ದು, ತಾನು ಸಿಎಂ ಹುದ್ದೆಯಿಂದ ಕೆಳಗಿಳಿಯವುದಾಗಿ 2 ತಿಂಗಳ ಹಿಂದೆ ಆನಂದಿ ಬೆನ್ ಪಟೇಲ್ ಅವರು ಹೇಳಿದ್ದರು. ಮಾತ್ರವಲ್ಲದೇ ಈ ಬಗ್ಗೆ ಸೋಮವಾರ ತಮ್ಮ ಫೇಸ್ ಬುಕ್ ಮೂಲಕ ಬಿಜೆಪಿ ಹೈಕಮಾಂಡ್ ಗೆ ಮನವಿ ಮಾಡಿಕೊಂಡಿದ್ದರು. ಇದೀಗ ಅವರ ರಾಜೀನಾಮೆಯ ಬಳಿಕ ಸಿಎಂ ಸ್ಥಾನಕ್ಕೆ ನಿತೀನ್ ಭಾಯಿ ಪಟೇಲ್ ಮತ್ತು ಸೌರಭ್ ಪಟೇಲ್ ಹೆಸರು ಕೇಳಿಬರುತ್ತಿದೆ ಎಂಬುವುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಗುಜರಾತ್ ನಲ್ಲಿ ಇತ್ತೀಚೆಗೆ ನಡೆದ ಪಟೇಲ್ ಸಮುದಾಯದ ಹೋರಾಟ, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿಭಾಯಿಸುವಲ್ಲಿ ವಿಫಲರಾಗಿರುವ ನಿಟ್ಟಿನಲ್ಲಿ ಬೆನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಆನಂದಿ ಬೆನ್ ಪಟೇಲ್ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇವೆ. ಬೆನ್ ಅವರು ಗುಜರಾತ್ ಅಭಿವೃದ್ಧಿಗಾಗಿ ತುಂಬಾ ಶ್ರಮಿಸಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.
Comments are closed.