ಲಕ್ನೋ: ಇತ್ತೀಚೆಗೆ ಬುಲಂದ್ ಶಹರ್ ನಲ್ಲಿ ತಾಯಿ ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬಳಿಕ ಅಪ್ರಾಪ್ತ ಮಗಳಿಗೆ ರಕ್ತಸ್ರಾವವಾಗುತ್ತಿದ್ದರೂ ವೈದ್ಯರು ನಂಬಲಿಲ್ಲ ಎಂದು ಬಾಲಕಿಯ ತಾಯಿ ತಿಳಿಸಿದ್ದಾರೆ.
ಆಂಗ್ಲ ಮಾಧ್ಯಮವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ‘ಕಳೆದ ಶುಕ್ರವಾರದಂದು ನನ್ನ ಮತ್ತು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಬಳಿಕ ತಮ್ಮ ಅಪ್ರಾಪ್ತ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದು, ನಡೆದ ಘಟನೆಯ ಬಗ್ಗೆ ವೈದ್ಯರಿಗೆ ತಿಳಿಸಿದ್ದೇವೆ. ಆದರೆ ವೈದ್ಯರು ಇದನ್ನು ನಂಬಲೇ ಇಲ್ಲ. ಮಾತ್ರವಲ್ಲದೇ ಈ ಬಗ್ಗೆ ದೂರು ಕೊಡಲು ಹೋದಾಗ ಪೊಲೀಸರು ಹಾಗೂ ವೈದ್ಯರು ತಮ್ಮನ್ನು ಕೀಳಾಗಿ ನೋಡಿದರು ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾದಿಂದ ಶಹಾಪೂರ್ ಗೆ ಕಾರ್ಯಕ್ರಮವೊಂದಕ್ಕೆ ರಾತ್ರಿ ವೇಳೆ ತೆರಳುತ್ತಿದ್ದ ಕುಟುಂಬದ ಮೇಲೆ ದಾಳಿ ಮಾಡಿದ ದರೋಡೆಕೋರರ ತಂಡ ತಾಯಿ ಮತ್ತು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡಸಿತ್ತು.
ಸುಮಾರು 8ರಿಂದ10 ಮಂದಿಯಿದ್ದ ತಂಡ ನಮ್ಮ ಕೈ ಹಾಗೂ ಕಾಲುಗಳನ್ನು ಕಟ್ಟಿ ಹಾಕಿ ಚೆನ್ನಾಗಿ ಥಳಿಸಿದರು. ನಂತರ ಸಹಾಯಕ್ಕಾಗಿ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದರೂ ಯಾರು ತಮ್ಮ ನೆರವಿಗೆ ಬರಲಿಲ್ಲ. ಹೀಗಾಗಿ ಆರೋಪಿಗಳನ್ನು ಮೂರು ತಿಂಗಳೊಳಗೆ ಸೆರೆಹಿಡಿದು ಶಿಕ್ಷಿಸದಿದ್ದಲ್ಲಿ ಮೂವರು ಆತ್ಮಹತ್ಯೆಗೆ ಶರಣಾಗುವುದಾಗಿ ಎಂದು ವೃತ್ತಿಯಲ್ಲಿ ಚಾಲಕನಾಗಿರುವ ಬಾಲಕಿಯ ತಂದೆ ತಿಳಿಸಿದ್ದಾರೆ.
Comments are closed.