ಚೆನ್ನೈ: ತಮಿಳುನಾಡಿನಲ್ಲಿ ಸಿನಿಮೀಯ ರೀತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಒಳಗಿನವರೇ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ತನಿಖೆ ನಡೆಸುತ್ತಿರುವ ತಮಿಳುನಾಡು ಪೊಲೀಸರು, ಪ್ರಕರಣದಲ್ಲಿ ಒಳಗಿನವರದ್ದೇ ಕೈವಾಡ ಇದೆ ಎಂಬ ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣದ ಸಂಬಂಧ ವಿಚಾರಣೆ ಎದುರಿಸುವಂತೆ ಹಲವು ಬ್ಯಾಂಕ್ ನೌಕರರಿಗೆ ತನಿಖಾಧಿಕಾರಿಗಳು ಸೂಚಿಸಿದ್ದಾರೆ. ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಎಸ್ ಬಿಐ ಸೇರಿದಂತೆ ಇನ್ನೂ ಅನೇಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಅಧಿಕಾರಿಗಳು/ ನೌಕರರಿಗೆ ತನಿಖಾಧಿಕಾರಿಗಳು ಸೂಚನೆ ನೀಡಿದ್ದಾರೆ.
ದರೋಡೆಕೋರರು ರೈಲಿನ ಮೇಲಿನಿಂದಲೇ ಗ್ಯಾಸ್ ಕಟ್ಟರ್ ಬಳಸಿ ಬೋಗಿಯ ಒಳಗೆ ಇಳಿದು 5.78 ಕೋಟಿ ರುಪಾಯಿ ಹಣವನ್ನು ದೋಚಿದ್ದರು. ಸುಮಾರು 5 ಬ್ಯಾಂಕ್ ಗಳ ಹಳೇ ನೋಟುಗಳನ್ನು ರೈಲಿನಲ್ಲಿ ಸಾಗಿಸಲಾಗುತ್ತಿತ್ತು. ರೈಲು ನಿಲ್ದಾಣಕ್ಕೆ ಬಂದು ನಿಂತಾಗ ಬಾಕ್ಸ್ ಗಳೆಲ್ಲಾ ಖಾಲಿಯಾಗಿದ್ದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
Comments are closed.