ಅಗ್ರಾ: ಸಚಿವ ಅಜಂ ಖಾನ್ ಅವರ ಕಳೆದು ಹೋಗಿದ್ದ ಎಮ್ಮೆಗಳನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದ ಉತ್ತರ ಪ್ರದೇಶ ಪೊಲೀಸರಿಗೀಗ ಇನ್ನೊಂದು ಸವಾಲು ಎದುರಾಗಿದ್ದು ಮಾಜಿ ಸಚಿವ ,ಸಂಸದ ರಾಮ್ ಶಂಕರ್ ಕಠೇರಿಯಾ ಅವರ ನಾಯಿ ಹುಡುಕಬೇಕಾಗಿದೆ.
ಕಠೇರಿಯಾ ಅವರ ಲ್ಯಾಬರ್‌ಡಾರ್ ತಳಿಯ ಕಪ್ಪು ಬಣ್ಣದ ಕಾಳು ಎಂಬ ಮುದ್ದಿನ ನಾಯಿ ಕಳೆದು ಹೋಗಿದ್ದು,ಪತ್ನಿ ಮೃದುಲಾ ಅವರು ಎಸ್‌ಪಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮೃದುಲಾ ಪೊಲೀಸರು ಅಜಂ ಖಾನ್ ಅವರ ಎಮ್ಮೆಗಳನ್ನು ಹುಡುಕಿ ಕೊಡುತ್ತಾರೆ ನಮ್ಮ ನಾಯಿಯನ್ನೇಕೆ ಹುಡುಕಿ ಕೊಡಬಾರದು ಎಂದಿದ್ದಾರೆ.
ಕಾಳು ನಾಪತ್ತೆಯಾದ ಬಳಿಕ ಇನ್ನೊಂದು ನಾಯಿ ಭೂರಾ 3 ದಿನಗಳಿಂದ ಏನನ್ನೂ ತಿನ್ನದೆ ತೀವ್ರ ಬಳಲಿಹೋಗಿದೆ ಆದಷ್ಟು ಬೇಗ ಕಾಳುವನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
-ಉದಯವಾಣಿ
Comments are closed.