ರಾಷ್ಟ್ರೀಯ

ರಾವಣನಿಗೆ ಅವಮಾನವಾದ್ರೆ ಈ ಗ್ರಾಮಸ್ಥರು ಸಹಿಸುವುದಿಲ್ಲ!

Pinterest LinkedIn Tumblr

ravanaನೋಯ್ಡಾ: ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ಬಿಸ್ರಕ್ ಧಾಮ್ ಗ್ರಾಮದ ಜನರಿಗೆ ರಾಕ್ಷಸ ರಾವಣ ಆರಾಧ್ಯ ದೈವ. ರಾವಣ ಈ ಗ್ರಾಮದಲ್ಲೇ ಜನಿಸಿದ್ದ ಎಂಬ ಪ್ರತೀತಿಯಿದೆ. ಈ ಬಗ್ಗೆ ವೇದ ಪುರಾಣಗಳಲ್ಲಿ ಮಾಹಿತಿಯಿದೆ.

ಹಿಂದಿನಿಂದಲೂ ಈ ಗ್ರಾಮದ ಜನರು ರಾವಣನನ್ನು ಪೂಜಿಸುತ್ತಾರಂತೆ! ಈ ಗ್ರಾಮದಲ್ಲಿ ರಾವಣನ ದೊಡ್ಡ ಮೂರ್ತಿಯನ್ನೂ ಸ್ಥಾಪಿಸಲಾಗಿದೆ. ಆದರೆ ಈಗ ಇಲ್ಲಿನ ಜನರು ರಾವಣನ ಅವಕೃಪೆಗೆ ಗುರಿಯಾಗುವ ಭೀತಿ ಎದುರಿಸುತ್ತಿದ್ದಾರೆ. ಇತ್ತೀಚೆಗೆ ನಿರ್ವಿುಸಲಾದ ಬೃಹತ್ ರಾವಣನ ದೇಗುಲದಲ್ಲಿ ರಾವಣನ ಮೂರ್ತಿಯನ್ನು ಒಡೆದುಹಾಕಲಾಗಿದೆ.

ಈ ರಾವಣನ ಮೂರ್ತಿ ಒಡೆದುಹಾಕಿದ್ದು ಬೇರ್ಯಾರೂ ಅಲ್ಲ, ಅದೇ ಗ್ರಾಮದ ಪುರೋಹಿತರು! ಈ ಸಂಬಂಧ ಪಂಚಾಯಿತಿ ನಡೆಸಿ ಈಗ ಇನ್ನೊಂದು ರಾವಣನ ಮೂರ್ತಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ, ರಾವಣನ ಮೂರ್ತಿ ಧ್ವಂಸ ಮಾಡಿರುವ ಪುರೋಹಿತರು ಸೇರಿ 30 ಜನರ ವಿರುದ್ಧ ಇಲ್ಲಿನ ಜನರು ದೂರು ನೀಡಿದ್ದಾರೆ.

ಈ ದೇಗುಲದ ಆವರಣದಲ್ಲಿ ರಾಮನ ಕುಟುಂಬದ ಎಲ್ಲ ಸದಸ್ಯರ ಮೂರ್ತಿಯನ್ನೂ ಪ್ರತಿಷ್ಠಾಪಿಸುತ್ತೇವೆ ಎಂದು ಆಡಳಿತ ಮಂಡಳಿ ಹೇಳಿದೆ. ರಾಮ ಪರಿವಾರ, ರಾಧಾಕೃಷ್ಣ, ಗಣೇಶ, ಮಾತಾ ಮಂದಿರ ಮತ್ತು ಶಿವ ಪರಿವಾರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ.

Comments are closed.