ಅಂತರಾಷ್ಟ್ರೀಯ

ಕ್ವಾರ್ಟರ್ ಫೈನಲ್‍ಗೆ ಭಾರತದ ಸಿಂಧು

Pinterest LinkedIn Tumblr

sindhu

ರಿಯೊ: ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‍ಗೆ ಲಗ್ಗೆ ಹಾಕಿರುವ ಭಾರತ ಸಿಂಧು ತೈಪೆ ಚೀನಾದ ತೈ ಟ್ಝುಯಿಂಗ್ ವಿರುದ್ಧ ಮೇಲುಗೈ ಸಾಧಿಸಿ 21-13, 21-15ರ ಅಂತರದಲ್ಲಿ ಸುಲಭ ಜಯಗಳಿಸಿದ್ದಾರೆ.

ಕೇವಲ 40 ನಿಮಿಷಗಳಲ್ಲೇ 8ನೇ ಶ್ರೇಯಾಂಕಿತೆಯನ್ನು ಮಣಿಸಿದ ಸಿಂಧು ಎರಡು ಬಾರಿ ವಿಶ್ವ ಚಾಂಪಿಯನ್‍ಶಿಪ್ ಕಂಚಿನ ಪದಕ ವಿಜೇತರಾಗಿದ್ದು, ಈಗ ಲಂಡನ್ ಒಲಿಂಪಿಕ್ಸ್‍ನ ರಜತ ಪದಕ ವಿಜೇತೆ ಚೀನಾದ ವಾಂಗ್ ಯಿಹಾನ್ ಅವರನ್ನು ಎದುರಿಸಲಿದ್ದಾರೆ.

ಇದಕ್ಕೂ ಮೊದಲು ಡೆನ್ಮಾರ್ಕ್‍ನ ಜಾನ್ ಜೋರ್ಗೆನ್ಸೆನ್ ವಿರುದ್ಧ 21-19, 21-19ರ ಅಂತರದಲ್ಲಿ ಗೆದ್ದ ಭಾರತದ ಕಿಡಂಬಿಕೆ, ಶ್ರೀಕಾಂತ್ ಪುರುಷರ ಸಿಂಗಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಒಟ್ಟಿನಲ್ಲಿ 42 ನಿಮಿಷಗಳ ಕಾಲ ಸೆಣೆಸಿದ ಜೋರ್ಗೆನ್ಸ್‍ನ್ ಅವರನ್ನು ಮಣಿಸಿದ ಶ್ರೀಕಾಂತ್ ಅವರನ್ನು ಕ್ವಾರ್ಟರ್ ಫೈನಲ್‍ನಲ್ಲಿ ಎದುರಿಸಲಿದ್ದಾರೆ.

Comments are closed.