ನವದೆಹಲಿ: ಮೈಕ್ರೋವೇವ್ ಓವೆನ್ ಸ್ಫೋಟಗೊಂಡ ಪರಿಣಾಮ ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಪಶ್ಚಿಮ ದೆಹಲಿಯ ಜಗತ್ ಪುರಿ ಪ್ರದೇಶದ ಬೇಕರಿಯಲ್ಲಿ ಸಂಭವಿಸಿದೆ.
ಮುಂಜಾನೆ 5.20 ಕ್ಕೆ ಸ್ಫೋಟ ಸಂಭವಿಸಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಕಚೇರಿಗೆ ಕರೆ ಮಾಡಲಾಯಿತು. ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಆರು ಮಂದಿಯನ್ನು ರಕ್ಷಿಸಿ ಹೆಗ್ಡೆವಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೈನುಲ್, ಸಾಜಿದ್, ರಫಾಕತ್ ಮೃತ ಪಟ್ಟ ಕೆಲಸಗಾರರು. ಗಾಯಗೊಂಡ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Comments are closed.