ಮನೋರಂಜನೆ

ಕ್ರೀಡಾಪಟುಗಳನ್ನು ಅಪಹಾಸ್ಯ ಮಾಡಿದ್ದ ಶೋಭಾ ಡೇ ಕಾಲೆಳೆದ ಸೆಹ್ವಾಗ್ ಹೇಳಿದ್ದೇನು…?

Pinterest LinkedIn Tumblr

shobha-Sakshi-Veeru

ನವದೆಹಲಿ: ಭಾರತದ ಅಥ್ಲೀಟ್ ಗಳು ರಿಯೋಗೆ ತೆರಳುವುದು ಮೋಜು ಮಾಡುವುದಕ್ಕೆ, ಅವರನ್ನು ಒಲಂಪಿಕ್ಸ್ ಗೆ ಕಳಿಸುವುದು ವ್ಯರ್ಥ, ದುಡ್ಡು ದಂಡ ಎಂದೆಲ್ಲಾ ಟ್ವಿಟರ್ ನಲ್ಲಿ ಬರೆದಿದ್ದ ಅಂಕಣಗಾರ್ತಿ, ಕಾದಂಬರಿಗಾರ್ತಿ ಶೋಭಾ ಡೇ ಅವರಿಗೆ ಟ್ವೀಟ್ ಮೂಲಕ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಿರುಗೇಟು ನೀಡಿದ್ದಾರೆ.

ವ್ಯಂಗ್ಯ ಧಾಟಿಯಲ್ಲಿ ಶೋಭಾ ಡೇ ಗೆ ತಿರುಗೇಟು ನೀಡಿರುವ ವೀರೇಂದ್ರ ಸೆಹ್ವಾಗ್, ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವ ಕುಸ್ತಿಪಟು ಸಾಕ್ಷಿ ಮಲಿಕ್ ಅವರ ಭಾವಚಿತ್ರವನ್ನು ಅಪ್ ಡೇಟ್ ಮಾಡಿ, ಸಾಕ್ಷಿ ಮಲಿಕ್ ಕೊರಳಲ್ಲಿರುವ ಕಂಚಿನ ಪದಕ ಎಷ್ಟು ಶೋಭೆ ತರುತ್ತಿದೆಯಲ್ಲವೇ? (#SakshiMalik ke gale me medal kitna “Sobha De” raha hai na !!! #HappyRakshaBandhan ) ರಕ್ಷಾಬಂಧನದ ಶುಭಾಶಯಗಳು ಎಂದು ಹೇಳಿದ್ದಾರೆ. ಟ್ವೀಟ್ ನಲ್ಲಿ ಶೋಭಾ ಡೇ ಅವರ ಹೆಸರು ಬರುವಂತೆ ವೀರೇಂದ್ರ ಸೆಹ್ವಾಗ್ ಪನ್ ಮಾಡುವ ಮೂಲಕ ಕ್ರೀಡಾಪಟುಗಳನ್ನು ಅವಮಾನ ಮಾಡಿದ್ದ ಶೋಭಾ ಡೇ ಅವರಿಗೆ ತಿರುಗೇಟು ನೀಡಿರುವುದು ಸ್ಪಷ್ಟವಾಗಿದೆ.

ಅಚ್ಚರಿ ಎಂದರೆ ಬಿಗ್ ಬೀ ಅಮಿತಾಬ್ ಬಚ್ಚನ್ ಸಹ ವೀರೇಂದ್ರ ಸೆಹ್ವಾಗ್ ಅವರ ಟ್ವೀಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ನಿಮ್ಮ ಸೆನ್ಸ್ ಆಫ್ ಹ್ಯೂಮರ್ ಮೂಲಕ, ಕ್ರೀಡಾಂಗಣದ ಹೊರಗೆ ಸಿಕ್ಸರ್ ಭಾರಿಸಿದ್ದೀರಾ ಎಂದು ಟ್ವೀಟ್ ಮಾಡಿದ್ದಾರೆ.

Comments are closed.