ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಅಬಾಧಿತವಾಗಿದ್ದು, ದೇಶದಲ್ಲಿ ಈಗ ಲೋಕಸಭೆ ಚುನಾವಣೆ ನಡೆದರೂ ಎನ್ ಡಿಎ ಬಹುಮತ ಪಡೆಯಲಿದೆ ಎಂದು ನೂತನ ಸಮೀಕ್ಷೆಯೊಂದು ಹೇಳಿದೆ.
‘ಇಂಡಿಯಾ ಟುಡೇ-ಕಾರ್ವಿ’ ನಡೆಸಿದ ನೂತನ ಸಮೀಕ್ಷೆ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಈಗಲೂ ಜನಪ್ರಿಯ ನಾಯಕರಾಗಿ ಮತದಾರರ ಮನದಲ್ಲಿ ಉಳಿದುಕೊಂಡಿದ್ದು, ಈಗ ಚುನಾವಣೆ ನಡೆದರೆ ಎನ್ ಡಿಎ 304 ಸ್ಥಾನಗಳೊಂದಿಗೆ ಪುನಃ ಬಹುಮತ ಗಳಿಸಲಿದೆ ಎಂದು ಹೇಳಿದೆ.
ಜನಪ್ರಿಯ ಪ್ರಧಾನಿ ಅಭ್ಯರ್ಥಿಗಳಲ್ಲಿ ನರೇಂದ್ರ ಮೋದಿ ಶೇ.50, ರಾಹುಲ್ ಗಾಂಧಿ ಕೇವಲ ಶೇ.13 ಮತ ಪಡೆದಿದ್ದಾರೆ. ಶೇಕಡಾವಾರು ಮತದಲ್ಲಿ ಎನ್‌ಡಿಎ 40, ಯುಪಿಎ 26, ಇತರರು 36 ಮತ ಪಡೆಯಲಿದ್ದಾರೆ.
ಎನ್‌ಡಿಎ 2014ರ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ 32 ಸೀಟು ಕಡಮೆ ಗಳಿಸಲಿದ್ದರೂ ಬಹುಮತ ಪಡೆಯಲಿದೆ. ಕಾಂಗ್ರೆಸ್ 35 ಸೀಟು ಸಾಮರ್ಥ್ಯ ವೃದ್ಧಿಸಿಕೊಂಡು 94 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.
ನಿತೀಶ್ ನಂ.1: ಜನಪ್ರಿಯ ಸಿಎಂಗಳಲ್ಲಿ ಬಿಹಾರದ ನಿತೀಶ್ ಕುಮಾರ್ ಮೊದಲ ಸ್ಥಾನಿ ಯಾಗಿದ್ದು, 87 ಅಂಕ ಪಡೆದಿದ್ದಾರೆ. ಮ.ಪ್ರ.ದ ಶಿವರಾಜ್ ಚೌಹಾಣ್ 81, ಛತ್ತೀಸ್‌ಗಢದ ರಮಣ್ ಸಿಂಗ್ 70 ಅಂಕ ಪಡೆದಿದ್ದಾರೆ.
Comments are closed.