ರಾಷ್ಟ್ರೀಯ

ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿರುವ ಕಾರಣ ಸಿಇಒ ಸ್ಥಾನದಿಂದ ಕೆಳಗಿಳಿಸಿದರು: ಸಚಿನ್ ಬನ್ಸಾಲ್

Pinterest LinkedIn Tumblr

sachin_bansalನವದೆಹಲಿ: ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡಲು ನನ್ನಿಂದ ಆಗಲಿಲ್ಲ. ಹಾಗಾಗಿ ನನ್ನನ್ನು ಪ್ರಸ್ತುತ ಸ್ಥಾನದಿಂದ ಕೆಳಗಿಳಿಸಿದರು ಎಂದು ಫ್ಲಿಪ್‍ಕಾರ್ಟ್ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್ ಹೇಳಿದ್ದಾರೆ. ಫ್ಲಿಪ್‍ಕಾರ್ಟ್ ಸಂಸ್ಥೆ ಸಚಿನ್ ಅವರನ್ನು ಕಳೆದ ಜನವರಿಯಲ್ಲಿ ಸಿಇಒ ಸ್ಥಾನದಿಂದ ಕೆಳಗಿಳಿಸಿತ್ತು.

ಭಾರತದ ಅತೀ ದೊಡ್ಡ ಇ ಕಾಮರ್ಸ್ ಸಂಸ್ಥೆಯಾದ ಫ್ಲಿಪ್‍ಕಾರ್ಟ್, ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡದೇ ಇರುವ 300 ಉದ್ಯೋಗಿಗಳನ್ನು ಕೈಬಿಡಲಾಗುವುದು ಎಂದು ಹೇಳಿತ್ತು. ಫ್ಲಿಪ್‍ಕಾರ್ಟ್ ನ ಈ ನಿರ್ಧಾರ ಸಂಸ್ಥೆಯ ಉದ್ಯೋಗಿಗಳನ್ನು ಆತಂಕಕ್ಕೀಡು ಮಾಡಿತ್ತು. ಫ್ಲಿಪ್‍ಕಾರ್ಟ್ ನೀಡಿದ ಈ ಹೇಳಿಕೆಯ ಬೆನ್ನಲ್ಲೇ ತನ್ನನ್ನು ಯಾಕೆ ಸಿಇಒ ಸ್ಥಾನದಿಂದ ಕೆಳಗಿಳಿಸಿದರು ಎಂಬ ಪ್ರಶ್ನೆಗೆ ಸಚಿನ್ ಉತ್ತರ ನೀಡಿದ್ದಾರೆ.

ಜನವರಿ ತಿಂಗಳಿನಲ್ಲಿ ಸಚಿನ್ ಬನ್ಸಾಲ್ ಅವರನ್ನು ಸಿಇಒ ಸ್ಥಾನದಿಂದ ಕೆಳಗಿಳಿಸಿ ಚೀಫ್ ಆಪರೇಟಿಂಗ್ ಆಫೀಸರ್ ಆಗಿದ್ದ ಬಿನ್ನಿ ಬನ್ಸಾಲ್ ಅವರನ್ನು ಸಿಇಒ ಆಗಿ ನೇಮಕ ಮಾಡಲಾಗಿತ್ತು, ಬನ್ಸಾಲ್ ಸರ್‍‍ನೇಮ್ ಇದ್ದರೂ ಇವರು ಸಂಬಂಧಿಕರೇನೂ ಅಲ್ಲ. ಇವರಿಬ್ಬರೂ ಅಮೆಜಾನ್ ಕಂಪನಿಯ ಮಾಜಿ ಉದ್ಯೋಗಿಗಳಾಗಿದ್ದಾರೆ.

ಶುಕ್ರವಾರ ತನ್ನ ಉದ್ಯೋಗಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಸಚಿನ್, ಕಳೆದ 1 ವರ್ಷದ ಹಿಂದೆ, 6 ತಿಂಗಳಿನ ಹಿಂದೆ ಇದ್ದವರು ಮ್ಯಾನೇಜ್‍ಮೆಂಟ್‍ನಲ್ಲಿ ಇಲ್ಲ. ಎಲ್ಲವೂ ಸಂಪೂರ್ಣವಾಗಿ ಬದಲಾಗಿದೆ ಅಲ್ಲವೆ? ಅಂದರೆ ನಿನ್ನೆ ಇದ್ದವರು ಇವತ್ತು ಇರಲ್ಲ. ನಾನು ಬದಲಾಗಿದ್ದೇನೆ. ನಾನು ಸಿಇಒ ಆಗಿದ್ದೆ, ನನ್ನನ್ನೂ ಆ ಸ್ಥಾನದಿಂದ ಬದಲಿಸಲಾಗಿದೆ. ಈ ಬದಲಾವಣೆಯೂ ನಮ್ಮ ಕೆಲಸದ ಸಾಮರ್ಥ್ಯದ ಜತೆಗೆ ತಳುಕು ಹಾಕಿಕೊಂಡಿದೆ ಎಂದಿದ್ದಾರೆ.

Comments are closed.