ರಾಷ್ಟ್ರೀಯ

ಚಪ್ಪಲಿ ಒದ್ದೆಯಾಗದಂತೆ ನೆರೆ ವೀಕ್ಷಣೆ ಮಾಡಿದ ಮಧ್ಯಪ್ರದೇಶದ ಸಿಎಂ!

Pinterest LinkedIn Tumblr

Shivraj-Singh-Chouhanಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನೆರೆಪೀಡಿತ ಪನ್ನಾ ಜಿಲ್ಲೆಯಲ್ಲಿ ನೆರೆ ವೀಕ್ಷಣೆ ಮಾಡಿದ್ದಾರೆ. ವಿಶೇಷವೇನೆಂದರೆ ಚೌಹಾಣ್ ಅವರನ್ನು ಅವರ ಇಬ್ಬರು ಸಹಾಯಕರು ಎತ್ತಿಕೊಂಡು ಕಾಲು ಒದ್ದೆಯಾಗದಂತೆ ನೆರೆ ವೀಕ್ಷಣೆ ಮಾಡಲು ಸಹಾಯ ಮಾಡಿದ್ದಾರೆ.

ಚೌಹಾಣ್ ರನ್ನು ಸಹಾಯಕರು ಎತ್ತಿಕೊಂಡು ನೆರೆಪ್ರದೇಶಗಳಿಗೆ ಕರೆದೊಯ್ಯುತ್ತಿರುವ ಫೋಟೊ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ, ಸಾಮಾಜಿಕ ತಾಣಗಳಲ್ಲಿ ಚೌಹಾಣ್ ಫೋಟೊವನ್ನು ಟ್ರೋಲ್ ಮಾಡಲಾಗಿದೆ.

ಚೌಹಾಣ್ ಅವರ ಈ ನಡೆಯನ್ನು ಖಂಡಿಸಿದ ಮಧ್ಯಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಅರುಣ್ ಯಾದವ್, ಪ್ರಚಾರಕ್ಕಾಗಿ ಚೌಹಾಣ್ ಫೋಟೊ ಸ್ಟಂಟ್ ಮಾಡುತ್ತಿದ್ದಾರೆ. ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರ ಕಷ್ಟಗಳನ್ನು ಆಲಿಸುವ ಬದಲು ತನ್ನೊಂದಿಗೆ ಇರುವ ಭದ್ರತಾ ಸಿಬಂದಿಗಳಿಗೆ ತೊಂದರೆ ನೀಡಿದ್ದಾರೆ. ಅವರ ಯಥಾರ್ಥ ಮುಖ ಈ ಫೋಟೊ ಮೂಲಕ ಬಹಿರಂಗವಾಗಿದೆ. ಅವರ ಈ ಉಳಿಗಮಾನ್ಯದ ಮನಸ್ಥಿತಿಯನ್ನು ನಾವು ಖಂಡಿಸುತ್ತೇವೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಪನ್ನಾ ಜಿಲ್ಲೆಯ ಅಮನ್‍ಗಂಜ್ ತೆಹಸಿಲ್ ಎಂಬಲ್ಲಿ ಭದ್ರತಾ ಅಧಿಕಾರಿಗಳು ಚೌಹಾಣ್ ಅವರನ್ನು ಎತ್ತಿಕೊಂಡು ಸಾಗುತ್ತಿರುವ ಫೋಟೊ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇನ್ನೊಂದು ಫೋಟೊದಲ್ಲಿ ಚೌಹಾಣ್ ಅವರು ಬರಿಗಾಲಲ್ಲಿ ನಡೆಯುತ್ತಿದ್ದು, ಅವರ ಚಪ್ಪಲಿಯನ್ನು ಸಹಾಯಕರೊಬ್ಬರು ಹಿಡಿದಿದ್ದಾರೆ.

ಆದಾಗ್ಯೂ, ನೆರೆ ನೀರಿನಲ್ಲಿ ನಡೆಯುವಾಗ ಯಾವುದೇ ವಿಷಜಂತು ಕಚ್ಚದಿರಲಿ ಎಂಬ ಕಾರಣದಿಂದಲೇ ಮುಖ್ಯಮಂತ್ರಿಯವರನ್ನು ಹೊತ್ತೊಯ್ಯಲಾಯಿತು ಎಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರು ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ತಾಣದಲ್ಲಿ ಟ್ರೋಲ್ ಮಳೆ
ಚೌಹಾಣ್ ಅವರು ಈ ಫೋಟೊವೀಗ ಸಾಮಾಜಿಕ ತಾಣಗಳಾದ ಫೇಸ್‍ಬುಕ್ ಮತ್ತು ಟ್ವಿಟರ್‍ನಲ್ಲಿ ಟ್ರೋಲ್ ಆಗಿದೆ.

Comments are closed.