
ತಂಜಾವೂರ: ಆಕೆ 24 ವರ್ಷದ ಯುವತಿ. ಹೆಸರು ‘ಇಂಡಿಯಾ’. ತಂದೆ ಇಟ್ಟ ಹೆಸರಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ಯುವತಿ, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ.
ಯುವತಿಯನ್ನು ಭೇಟಿಯಾಗುವವರೆಲ್ಲರೂ ಸಹಜವಾಗಿಯೇ ಹೆಸರಿನ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಪದೇ ಪದೇ ಕೇಳುವ ಪ್ರಶ್ನೆಗೂ ಆಕೆ ಬೇಸರಗೊಂಡಿಲ್ಲ.
‘ನನ್ನ ತಂದೆ ಈ ಹೆಸರಿಟ್ಟಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿದ್ದ ನಮ್ಮ ತಂದೆ ದಿವಂಗತ ಆರ್. ಇಳಂಗೋವನ್ ರಾಷ್ಟ್ರೀಯತೆಯ ಪ್ರತಿಪಾದಕರಾಗಿದ್ದರು.
ದೇಶಾಭಿಮಾನದ ಪ್ರತೀಕವಾಗಿ ಈ ಹೆಸರಿಟ್ಟಿದ್ದಾರೆ. ಹಲವರು ಈ ಹೆಸರು ಕೇಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಂಗ್ಯವಾಡಿದ್ದಾರೆ. ಶಾಲೆ ಮತ್ತು ಕಾಲೇಜು ದಿನಗಳಲ್ಲೂ ಸಹಪಾಠಿಗಳು ಕುತೂಹಲದಿಂದ ಈ ಹೆಸರಿನ ಬಗ್ಗೆ ಕೇಳುತ್ತಿದ್ದರು’ ಎಂದು ಇಂಡಿಯಾ ಹೇಳುತ್ತಾರೆ.
ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಯುವತಿಯ ಮದುವೆ ಗುರುವಾರ ಜೆ.ಸ್ಟಾಲಿನ್ ಎನ್ನುವ ಯುವಕನ ಜತೆ ಸಾಂಪ್ರದಾಯಿಕವಾಗಿ ನಡೆಯಿತು.
Comments are closed.