ರಾಷ್ಟ್ರೀಯ

ಢಾಕಾ ಹೆಲಿಕಾಪ್ಟರ್ ದುರಂತ: ಒಬ್ಬಮೃತ್ಯು, ಪೈಲೆಟ್ ಸೇರಿ ನಾಲ್ವರು ಪ್ರಯಾಣಿಕರು ಗಾಯ

Pinterest LinkedIn Tumblr

helicapter_patana

ಢಾಕಾ, ಸೆ.17 : ಬೆರಳೆಣಿಕೆಯ ಅಂತರದಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್‍ಅಲ್ ಹಸನ್ ಹೆಲಿಕಾಪ್ಟರ್ ದುರಂತದಿಂದ ಬಚಾವಾಗಿದ್ದಾರೆ.

ದುರಂತದಲ್ಲಿ ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆಲ್‍ರೌಂಡರ್ ಶಕೀಬ್ ಅಲ್ ಹಸನ್ ಮತ್ತು ಆತನ ಪತ್ನಿ ಉಮ್ಮಿ ಅಜ್ಮದ್ ಶಶಿರ್ ಅವರು ರಾಯಲ್ ಟ್ಯೂಲಿಪ್ ರೆಜಾರ್ಟ್‍ನಿಂದ ಹೆಲಿಕಾಪ್ಟರ್‍ನಲ್ಲಿ ಹೊರಟು ಢಾಕಾದ ಕಾಕ್ಸ್ ಬಜಾರ್ ಬಳಿ ಇಳಿದಿದ್ದಾರೆ.

ಇವರನ್ನು ಇಳಿಸಿದ ಹೆಲಿಕಾಪ್ಟರ್ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಇನಾನಿ ಬೀಚ್‍ಬಳಿ ಪತನಗೊಂಡಿದೆ. ದುರಂತರದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಪೈಲೆಟ್ ಸೇರಿ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ವಿಷಯ ತಿಳಿದ ಕ್ರಿಕೆಟ್ ಶಕೀಬ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

Comments are closed.