ನವದೆಹಲಿ: ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಭಾನುವಾರ ವಿಕಿರಣ ಸೋರಿಕೆ ಪತ್ತೆಯಾಗಿದೆ ಎಂದು ದೆಹಲಿ ಅಗ್ನಿ ಶಾಮಕ ಇಲಾಖೆ ತಿಳಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಟಿ3 ಕಾಗೋ ಟರ್ವಿುನಲ್ ನಿಂದ ಇಲಾಖೆಗೆ ಬಂದ ದೂರವಾಣಿ ಕರೆಯೊಂದು ಯಾವುದೋ ಸರಕಿನಿಂದ ವಿಕಿರಣ ವಸ್ತು ಸೋರಿಕೆಯಾಗುತ್ತಿದೆ ಎಂದು ತಿಳಿಸಿತು. ತತ್ ಕ್ಷಣವೇ ಮುಂಜಾಗರೂಕತಾ ಕ್ರಮವಾಗಿ ಸರಕು ಸಮುಚ್ಚಯವನ್ನು ಅಧಿಕಾರಿಗಳು ತೆರವುಗೊಳಿಸಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಂಡವೊಂದರ ಜೊತೆಗೆ ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿದವು.
ಏರ್ ಫ್ರಾನ್ಸ್ ವಿಮಾನದಲ್ಲಿದ್ದ ಯಾವುದೋ ವೈದ್ಯಕೀಯ ಉಪಕರಣದಿಂದ ವಿಕಿರಣ ಸೋರಿಕೆ ಪತ್ತೆಯಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.
Comments are closed.