ರಾಷ್ಟ್ರೀಯ

ಈಜಿಪ್ಟ್ನ ರಾಣಿ ಕ್ಲಿಯೋಪಾತ್ರಳತಂಹ ಸೌಂದರ್ಯಕ್ಕಾಗಿ ಗೋಮೂತ್ರ ಹಾಗೂ ಗೋಮಯ ಬಳಸಿ

Pinterest LinkedIn Tumblr

gomutra_medicin_4

ಅಹ್ಮದಾಬಾದ್:  ಕ್ಲಿಯೊಪಾತ್ರಳ ಅಪೂರ್ವ ಚೆಲುವು ನಿಮ್ಮದಾಗಬೇಕಾದರೆ ಗೋಮೂತ್ರ ಬಳಸಿ” ಇದು ಯಾವುದೋ ಕಂಪೆನಿಯ ಜಾಹೀರಾತು ಅಲ್ಲ. ಗುಜರಾತ್ ಸರಕಾರದ ಗೋಸೇವಾ ಹಾಗೂ ಗೌಚರ್ ವಿಕಾಸ ಮಂಡಳಿಯ ಪ್ರಚಾರವಾಗಿದೆ.

ನಿಮ್ಮ ಸಹಜ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಸುವಿನ ಹಾಲು, ತುಪ್ಪ, ಗೋಮೂತ್ರ ಹಾಗೂ ಗೋಮಯ ಬಳಸಿ. ನಿಮ್ಮ ಮುಖದ ಚಿಕಿತ್ಸೆಗೆ ಈ ಉತ್ಪನ್ನಗಳನ್ನು ಬಳಸಿದರೆ ತ್ವಚೆ ಕಾಂತಿಯುಕ್ತವಾಗುತ್ತದೆ. “ಈಜಿಪ್ಟ್ನ ರಾಣಿ ಕ್ಲಿಯೋಪಾತ್ರ, ವಿಶ್ವದ ಅಪೂರ್ವ ಚೆಲುವಿನ ಮಹಿಳೆ ಎನ್ನಲಾಗುತ್ತಿದೆ. ಈಕೆ ಸ್ನಾನಕ್ಕೆ ಹಾಲು ಬಳಸುತ್ತಿದ್ದರು” ಎಂದು ಮಂಡಳಿ ಪ್ರಚಾರ ಮಾಡುತ್ತಿದೆ. ಮಂಡಳಿಯ ವೆಬ್ಸೈಟ್ನಲ್ಲಿ ನೀಡುವ ಆರೋಗ್ಯ ಗೀತಾ ಎಂಬ ಸಲಹೆಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಹಲವು ರೋಗಗಳಿಗೆ ಗೋಮೂತ್ರವನ್ನು ಔಷಧವಾಗಿ ಬಳಸಬಹುದು ಎಂಬ ಸೂಚನೆಯನ್ನೂ ಈ ವೆಬ್ಸೈಟ್ ನೀಡುತ್ತಿದೆ.

ಇಟಲಿ, ರಷ್ಯಾ ಹಾಗೂ ಅಮೆರಿಕದ ಸಂಶೋಧಕರು ಗೋಮೂತ್ರ, ಗೋಮಯ ಹಾಗೂ ಹಾಲಿನ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ಇದು ದೃಢಪಟ್ಟಿದೆ ಎಂದು ಹೇಳಿದೆ.
ಮುಖದ ಚಿಕಿತ್ಸೆ ವಿಭಾಗದಲ್ಲಿ ಈ ಮಾಹಿತಿಯನ್ನು ಪ್ರಚುರಪಡಿಸಲಾಗುತ್ತಿದೆ.

Comments are closed.