ನಾಗಪುರ: ಬರೋಬ್ಬರಿ 91 ವರ್ಷಗಳ ಬಳಿಕ ಆರೆಸ್ಸೆಸ್ ತನ್ನ ಸಮವಸ್ತ್ರವನ್ನು ಬದಲಾಯಿಸಿದೆ. ಖಾಕಿ ಚೆಡ್ಡಿ ಬದಲಿಗೆ ಕಂದು ಪ್ಯಾಂಟ್ ಬಳಸಲು ಆರಂಭಿಸಿದೆ.
ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ವಿಜಯದಶಮಿ ಸಮಾರಂಭದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ನೂತನ ಸಮವಸ್ತ್ರ ಧರಿಸಿ ಪಥಸಂಚಲನ ನಡೆಸಿದ್ದಾರೆ. ವೇದಿಕೆ ಮೇಲೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿ ಹಲವು ನಾಯಕರು ನೂತನ ಪ್ಯಾಂಟ್ ಧರಿಸಿ ಭಾಗಿಯಾಗಿದ್ದರು.
ಕೇಂದ್ರ ಸಚಿವ ನಿತಿನ್ ಘಡ್ಕರಿ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಕೂಡಾ ಹೊಸ ಸಮವಸ್ತ್ರ ಧರಿಸಿ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ.
Comments are closed.