ನವದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಸಮಾಜವಾದಿ ಪಕ್ಷದ ಸಂಸದನ ಆಪ್ತ ಕಾರ್ಯದರ್ಶಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಗೂಢಚರ್ಯೆ ಆರೋಪದ ಮೇಲೆ ನಿನ್ನೆ ಪಾಕ್ ಹೈ ಕಮಿಷನರ್ ಸಿಬ್ಬಂದಿ ಬಂಧಸಿ ಆತನನ್ನು ದೇಶದಿಂದ ಉಚ್ಚಾಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ರಾಜ್ಯ ಸಭಾ ಸದಸ್ಯ ಮುನಬ್ಬಾರ್ ಆಪ್ತ ಕಾರ್ಯದರ್ಶಿ ಪರ್ಹತ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ನಿನ್ನೆ ರಾತ್ರಿ ಪರ್ಹತ್ ನನ್ನು ಬಂಧಿಸಿರುವ ದೆಹಲಿ ಅಪರಾಧ ದಳ ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಭಾಗಿಯಾಗಿರು ಶಂಕೆ ವ್ಯಕ್ತ ಪಡಿಸಿರುವ ಪೊಲೀಸರು ಅವರನ್ನೆಲ್ಲಾ ಸೆರೆ ಹಿಡಿಸಲು ಪ್ರಯತ್ನ ನಡೆಸಿದ್ದಾರೆ.
ಭಾರತದ ರಕ್ಷಣಾ ಇಲಾಖೆಯ ಮಾಹಿತಿ ಹಾಗೂ ದಾಖಲೆಗಳನ್ನು ಮತ್ತು ಗಡಿಯಲ್ಲಿ ಬಿಎಸ್‌ಎಫ್ ಯೋಧರ ನೇಮಕ ಕುರಿತ ಗೌಪ್ಯ ಮಾಹಿತಿಯನ್ನು ರವಾನೆ ಮಾಡಿದ ಆರೋಪ ಪಾಕ್‌ನ ಹೈ ಕಮಿಷನರ್ ಮೇಲಿದೆ. ಇದಕ್ಕೆ ಕೆಲ ಭಾರತೀಯರು ಸಹಾಯ ಮಾಡಿದ್ದಾರೆ ಎನ್ನಲಾಗಿದ್ದು ಈ ಸಂಬಂಧ ನಿನ್ನೆ ಜೋಧಪುರ್ ಮೂಲದ ಪಾಸ್‌ಪೋರ್ಟ್ ಹಾಗೂ ವಿಸಾ ಏಜೆಂಟ್ ಮೆಹಮೂದ್ ಅಕ್ತರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
Comments are closed.