ನವದೆಹಲಿ (ನ.09): ಅಮೆರಿಕಾದ 45ನೇ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಚುನಾವಣಾ ಅಭಿಯಾನದ ಸಂದರ್ಭದಲ್ಲಿ ನೀವು ಭಾರತದ ಬಗ್ಗೆ ತೋರಿದ ಸ್ನೇಹವು ಪ್ರಶಾಂಸಾರ್ಹ. ಮುಂಬರುವ ದಿನಗಳಲ್ಲಿ ಭಾರತ-ಅಮೆರಿಕಾ ಸಂಬಂಧವನ್ನು ಇನ್ನಷ್ಟು ಬಲಗೊಳ್ಳಲಿದೆ, ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮೊದಲಿಂದಲೂ ಹಲವು ವಿವಾದಗಳಿಗೆ ಈಡಾಗಿದ್ದ, ಸಮೀಕ್ಷೆಗಳಲ್ಲಿ ಸೋಲನ್ನನುಭವಿಸಬಹುದೆಂದು ಅಂದಾಜಿಸಲ್ಪಟ್ಟಿದ್ದ, 70 ವರ್ಷ ಪ್ರಾಯದ ಡೊನಾಲ್ಡ್ ಟ್ರಂಪ್ ಈಗ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದ್ದಾರೆ.
ಡೆಮಾಕ್ರಾಟ್ ಪಕ್ಷದ ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಭರ್ಜರಿ ಹಾಗೂ ಅನಿರೀಕ್ಷಿತ ಗೆಲುವು ಸಾಧಿಸಿದ್ದಾರೆ. ಬಹುಮತಕ್ಕೆ ಬೇಕಾದ 270 ಮತಗಳಿಗಿಂತ 6 ಮತ ಹೆಚ್ಚಿಗೆ ಪಡೆದು ಟ್ರಂಪ್ ಗೆದ್ದಿದ್ದಾರೆ. ಡೊನಾಲ್ಡ್ ಟ್ರಂಪ್ 276 ಮತ ಪಡೆದರೆ, ಹಿಲರಿ ಕ್ಲಿಂಟನ್ 218 ಮತಗಳಿಗೆ ತೃಪ್ತಿಪಟ್ಟಿದ್ದಾರೆ. ಈ ಮೂಲಕ 58 ಮತಗಳ ಅಂತರದಿಂದ ಗೆಲುವು ಪಡೆದು ಅಮೆರಿಕದ 45ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ರಾಷ್ಟ್ರೀಯ
Comments are closed.