ರಾಜಸ್ತಾನ: ‘ಅದಾನಿ, ಅಂಬಾನಿ ಸೇರಿದಂತೆ ಇತರರಿಗೆ ಈ ಬಗ್ಗೆ ಮುಂಚಿತವಾಗಿಯೇ ತಿಳಿದಿತ್ತು. ಅವರಿಗೆ ಸೂಚನೆ ನೀಡಲಾಗಿತ್ತು, ಅದರಂತೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಂಡರು’ ಹೀಗೆ ನೋಟು ರದ್ದತಿ ಕುರಿತಂತೆ ರಾಜಸ್ತಾನದ ಕೋಟಾ ಜಿಲ್ಲೆಯ ಲಾಡ್‌ಪುರ ಕ್ಷೇತ್ರದ ಬಿಜೆಪಿ ಶಾಸಕ ಭವಾನಿ ಸಿಂಗ್ ರಾಜಾವತ್ ನೀಡಿರುವ ಪ್ರತಿಕ್ರಿಯೆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ರಾಜಸ್ತಾನದ ಕೋಟಾದಲ್ಲಿ ಭವಾನಿ ಸಿಂಗ್ ಮಂಗಳವಾರ ನೀಡಿರುವ ಸಂದರ್ಶನದಲ್ಲಿ ನೋಟು ರದ್ದಾಗುವ ಕುರಿತು ಅದಾನಿ, ಅಂಬಾನಿಯಂತಹ ಉದ್ಯಮಿಗಳಿಗೆ ಮೊದಲೇ ಸೂಚನೆ ನೀಡಲಾಗಿತ್ತು ಎಂದು ಹೇಳಿದ್ದರು.
ಈ ಸಂದರ್ಶನದ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ‘ವಿಡಿಯೋದಲ್ಲಿ ತೋರಿಸಿರುವಂತೆ ನಾನು ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಆಫ್–ದಿ–ರೆಕಾರ್ಡ್ ಆಡಿದ ಮಾತುಗಳನ್ನು ತಿರುಚಲಾಗಿದೆ’ ಎಂದಿದ್ದಾರೆ.
#WATCH: BJP MLA from Rajasthan’s Kota Bhawani Singh claims Ambani & Adani had prior knowledge of the #DeMonetisation of Rs 500 & 1,000 notes pic.twitter.com/L8FRp1NofD
— ANI (@ANI_news) November 17, 2016
Comments are closed.