ರಾಷ್ಟ್ರೀಯ

ದೆಹಲಿ, ಹರಿಯಾಣದಲ್ಲಿ 4.4 ತೀವ್ರತೆಯ ಭೂಕಂಪನ

Pinterest LinkedIn Tumblr

bukampana-finalನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಹರಿಯಾಣದಲ್ಲಿ ಗುರುವಾರ ಬೆಳಿಗ್ಗೆ ಭೂಕಂಪನ ಉಂಟಾಗಿದ್ದು, ರಿಕ್ಟರ್‌ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ.

ಬೆಳಗಿನಜಾವ 4.30ಕ್ಕೆ ಲಘು ಭೂಕಂಪನ ಉಂಟಾಗಿದೆ ಎಂದು ಭೂಕಂಪ ಮಾಪನ ಇಲಾಖೆ ತಿಳಿಸಿದೆ.

ಭೂಕಂಪನ ಕೇಂದ್ರಬಿಂದು 10ಕಿ.ಮೀ. ಭೂಮಿಯಾಳದಲ್ಲಿತ್ತು ಎಂದು ಇಲಾಖೆ ಹೇಳಿದೆ.

ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಯಾವುದೇ ಹಾನಿಯಾದ ಬಗ್ಗೆ ಈವರೆಗೆ ವರದಿಯಾಗಿಲ್ಲ.

Comments are closed.