ನವದೆಹಲಿ: ‘ತುರ್ತು ಪರಿಸ್ಥಿತಿ ಸಂದರ್ಭಲ್ಲೂ ಇಂಥ ಬಿಕ್ಕಟ್ಟು ಇರಲಿಲ್ಲ’ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾಬ್ಯಾನರ್ಜಿ ಅವರು ನೋಟು ಹಿಂಪಡೆದ ಕ್ರಮಕ್ಕೆ ಗುರುವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
₹500, 1000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ಕೇಂದ್ರ ಸರ್ಕಾರದ ‘ಈ ನಿರ್ಧಾರ ಭಾರತವನ್ನು 100 ವರ್ಷಗಳಷ್ಟು ಹಿಂದಕ್ಕೊಯ್ಯಬಹುದು’ ಎಂದು ಅವರು ಟೀಕೆ ಮಾಡಿದ್ದಾರೆ.
ಗರಿಷ್ಠ ಮುಖಬೆಲೆಯ ನೋಟುಗಳನ್ನು ಹಿಂಪಡೆದ ನಿರ್ಧಾರವನ್ನು ಕೈಬಿಡಬೇಕು ಎಂದು ಮಮತಾ ಬ್ಯಾನರ್ಜಿ ಅವರು ನಿನ್ನೆಯಷ್ಟೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿಯಾಗಿ ಆಗ್ರಹಿಸಿದ್ದರು.
Comments are closed.