ರಾಷ್ಟ್ರೀಯ

ಜಿಯೋದ ಬ್ರಾಡ್‍ಬ್ಯಾಂಡ್ ಗೆ 15 ಎಂಬಿಪಿಎಸ್ ವೇಗದ 1 ಜಿಬಿ ಡೇಟಾಗೆ 83 ಪೈಸೆ

Pinterest LinkedIn Tumblr

Jioಮುಂಬೈ: ಗ್ರಾಹಕರಿಗೆ ಮೂರು ತಿಂಗಳು ಉಚಿತವಾಗಿ ಇಂಟರ್ ನೆಟ್ ನೀಡುವ ಮೂಲಕ ಸುದ್ದಿಯಾಗಿದ್ದ ಜಿಯೋ ಈಗ 1 ಗಿಗಾ ಬೈಟ್ಸ್ ವೇಗದ ಬ್ರಾಡ್‍ಬ್ಯಾಂಡ್ ಸೇವೆ ನೀಡಲು ಮುಂದಾಗಿದೆ.

ಹೌದು. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಕಂಪೆನಿ ಕೆಲ ದಿನಗಳಲ್ಲಿ ಬ್ರಾಡ್‍ಬ್ಯಾಂಡ್ ಸೇವೆಯನ್ನು ಆರಂಭಿಸಲಿದ್ದು, ತನ್ನ ಯೋಜನೆಯನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ. ಕನಿಷ್ಟ 400 ರೂ. ನಿಂದ ಆರಂಭವಾಗಿ 2 ಸಾವಿರ ರೂ. ವರೆಗಿನ ಪ್ಯಾಕ್‍ಗಳು ಲಭ್ಯವಿದೆ. ಜಿಯೋ ಗಿಗಾ ಫೈಬರ್ ಸ್ಪೀಡ್, ಗಿಗಾ ಫೈಬರ್ ವಾಲ್ಯೂಮ್, ಗಿಗಾ ಫೈಬರ್ ಸ್ಪೆಷಲ್ ಬ್ರಾಡ್ ಬ್ಯಾಂಡ್ ಕೆಟಗೆರಿಯಲ್ಲಿ ಪ್ಲಾನ್‍ಗಳು ಇವೆ.

ಜಿಯೋ ಸಿಮ್ ಪಡೆದಾಗ ಹೇಗೆ ಮೂರು ತಿಂಗಳು ಬಳಕೆಗೆ ಉಚಿತ ಆಫರ್‍ನ್ನು ಜಿಯೋ ನೀಡಿತ್ತೋ ಅದೇ ರೀತಿಯಾಗಿ ಜಿಯೋ ಫೈಬರ್ ಸೇವೆ ಪಡೆದವರಿಗೂ ಮೂರು ತಿಂಗಳು ಅನ್‍ಲಿಮಿಟೆಡ್ ವೆಲಕಂ ಆಫರ್ ನೀಡುವುದಾಗಿ ಕಂಪೆನಿ ತಿಳಿಸಿದೆ.

ಯಾವಾಗ ಅಧಿಕೃತವಾಗಿ ಈ ಸೇವೆಯನ್ನು ಆರಂಭಿಸಲಾಗುವುದು ಎನ್ನುವುದನ್ನು ಕಂಪೆನಿ ತಿಳಿಸಿಲ್ಲ. ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಕೇಬಲ್ ಹಾಕಲಾಗಿದ್ದು ಮುಂಬೈಯಲ್ಲಿ ಪೈಲಟ್ ಯೋಜನೆ ಆರಂಭಗೊಂಡಿದೆ.

Comments are closed.