ಚಂಢೀಗಡ್: ಪಂಜಾಬ್ ನ ಬಟಿಂಡಾದಲ್ಲಿ ಮದುವೆ ಸಮಾರಂಭದ ವೇಳೆ ತನ್ನೊಂದಿಗೆ ಡ್ಸಾನ್ಸ್ ಮಾಡಲು ನಿರಾಕರಿಸಿದ ಗರ್ಭಿಣಿ ಡ್ಯಾನ್ಸರ್ ಓರ್ವಳ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ನಡೆಸಿದೆ.
ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ವೇದಿಕೆ ಮೇಲೆ ಕುಣಿಯುತ್ತಿದ್ದ ಡ್ಯಾನ್ಸರ್ ಬಳಿ ತನ್ನೊಂದಿಗೆ ಕುಣಿಯುವಂತೆ ಕೇಳಿದ್ದಾನೆ ಈ ವೇಳೆ ಡ್ಯಾನ್ಸರ್ ಇದಕ್ಕೆ ನಿರಾಕರಿಸಿದ್ದು ಇದರಿಂದ ಆಕ್ರೋಶಗೊಂಡ ಯುವಕ ಗುಂಡು ಹಾರಿಸಿದ್ದಾನೆ. ಗುಂಡು ಡ್ಯಾನ್ಸ್ ಮಾಡುತ್ತಿದ್ದ ಯುವತಿಯ ತಲೆಗೆ ತಗುಲಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಡ್ಯಾನ್ಸರ್ ಗೆ ಗುಂಡು ತಗುಲುತ್ತಿದ್ದಂತೆ ಆರೋಪಿ ಕುಲವೀದರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ತಲೆಮರೆಸಿಕೊಂಡಿರುವವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ರಾಷ್ಟ್ರೀಯ
Comments are closed.