ನವದೆಹಲಿ: ನ್ಯಾ.ಜೆ.ಎಸ್ ಖೆಹರ್ ಅವರು ಮುಂದಿನ ವರ್ಷ ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಜನವರಿ 4, 2017ರಂದು ನ್ಯಾ.ಜೆ.ಎಸ್ ಖೆಹರ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದ ಮೊದಲ ಸಿಖ್ ಎಂಬ ಗೌರವಕ್ಕೆ ಪಾತ್ರವಾಗುತ್ತಿರುವ ನ್ಯಾ.ಜೆ.ಎಸ್ ಖೆಹರ್ ಅವರು ಭಾರತ 44ನೇ ಮುಖ್ಯ ನ್ಯಾಯಮೂರ್ತಿಯಾಗಿ ಜನವರಿ 4ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಆಗಸ್ಟ್ 4, 2017ರವರೆಗೆ ಅಧಿಕಾರದಲ್ಲಿರಲಿದ್ದಾರೆ.
ಮುಖ್ಯ ನ್ಯಾಮಮೂರ್ತಿ ಟಿಎಸ್ ಥಾಕೂರ್ ಅವರು ತಮ್ಮ ಸ್ಥಾನಕ್ಕೆ ನ್ಯಾ.ಜೆ.ಎಸ್ ಖೆಹರ್ ಅವರ ಹೆಸರನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರಾಷ್ಟ್ರೀಯ
Comments are closed.