ಸರ್ಕಾರಿ ಇಲಾಖೆಗಳು ಅಥವಾ ಸಚಿವಾಲಯಗಳು, ೫೦೦೦ ರೂ ಮೇಲ್ಪಟ್ಟಂತೆ ಮಾಡುವ ಎಲ್ಲ ಹಣ ಪಾವತಿಗಳು ಇನ್ನುಮುಂದೆ ಆನ್ಲೈನ್ ನಲ್ಲಿ ನಡೆಯಲಿವೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಈ ಹೊಸ ನಿಯಮ ಹಳೆಯ ಮಿತಿ ೧೦೦೦೦ ರೂ ಅನ್ನು ೫೦೦೦ ರೂಗೆ ಇಳಿಸಿದೆ.
ಎಲ್ಲ ಪಾವತಿಗಳನ್ನು ಡಿಜಿಟಲ್ ಮಾಡುವ ಉದ್ದೇಶದಿಂದ ಈ ನಡೆಗೆ ಮುಂದಾಗಿದ್ದೇವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಯಾವುದೇ ಸರಬರಾಜುದಾರರಿಗೆ, ಕಾಂಟ್ರಾಕ್ಟರ್ ಗಳಿಗೆ ಅಥವಾ ಯಾವುದೇ ಸಂಸ್ಥೆಗಳಿಗೆ ೫೦೦೦ ರೂ ಮೇಲ್ಪಟ್ಟ ಪಾವತಿಗಳನ್ನು ಆನ್ಲೈನ್ ಮೂಲಕವೇ ಮಾಡಬೇಕೆಂದು ಎಲ್ಲ ಇಲಾಖೆಗಳು/ಸಚಿವಾಲಯಗಳಿಗೆ ಸೂಚಿಸಲಾಗಿದೆ ಎಂದು ಹೇಳಿಕೆ ತಿಳಿಸದೆ.
ರಾಷ್ಟ್ರೀಯ
Comments are closed.