ರಾಷ್ಟ್ರೀಯ

ನೆಟ್ ಸಂಪರ್ಕವಿಲ್ಲದೆಯೇ ಪೇಟಿಎಂ ಸೇವೆಗಳನ್ನು ಬಳಸಬಹುದು!

Pinterest LinkedIn Tumblr

auto_paytm_photo_4ನವದೆಹಲಿ: ನಗದು ರಹಿತ ವಹಿವಾಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಪೇಟಿಎಂ ಇಂತರ್ ನೆಟ್ ಡೇಟಾ, ಸ್ಮಾರ್ಟ್ ಫೋನ್ ಸಹಾಯವಿಲ್ಲದೇ ನಗದು ರಹಿತ ವಹಿವಾಟು ನಡೆಸುವ ವ್ಯವಸ್ಥೆಯನ್ನು ಪರಿಚಯಿಸಿದೆ.
ಇಂಟರ್ ನೆಟ್ ಹೊಂದದವರನ್ನೂ ತಲುಪುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆಯನ್ನು ಪರಿಚಯಿಸಿರುವ ಪೇಟಿಎಂ, ಶುಲ್ಕ ರಹಿತ ದೂರವಾಣಿ ಸಂಖ್ಯೆಯನ್ನು (1800 1800 1234) ನೀಡಿದೆ. ಈ ಮೂಲಕ ಗ್ರಾಹಕರು ಹಾಗೂ ವ್ಯಾಪಾರಿಗಳು ಮೊಬೈಲ್ ಮೂಲಕ ಇಂಟರ್ ನೆಟ್ ಇಲ್ಲದೇ ವಹಿವಾಟು ನಡೆಸುವ ವಿಧಾನವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.
ಇಂಟರ್ ನೆಟ್ ರಹಿತ ಪೇಟಿಎಂ ವಹಿವಾಟುಗಳನ್ನು ಬಳಕೆ ಮಾಡಲು( ಗ್ರಾಹಕರು ಹಾಗೂ ವ್ಯಾಪಾರಿಗಳು) ಮೊದಲು ಪೇಟಿಎಂ ನಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಂಡು 4- ಅಂಕಿಗಳ ಪೇಟಿಎಂ ಪಿನ್ ಸೆಟ್ ಮಾಡಬೇಕು. ನಂತರ ಗ್ರಾಹಕರು ಹಣ ಸ್ವೀಕರಿಸುವವರ ಮೊಬೈಲ್ ನಂಬರ್ ಹಾಗೂ ಪಾವತಿ ಮಾಡಬೇಕಿರುವ ಮೊತ್ತ, ಪೇಟಿಎಂ ಪಿನ್ ನ್ನು ನಮೂದಿಸಿ ಒಂದು ಪೇಟಿಎಂ ವಾಲೆಟ್ ನಿಂದ ಮತ್ತೊಂದು ಪೇಟಿಎಂ ವಾಲೆಟ್ ಗೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಇಂಟರ್ ನೆಟ್ ಹೊಂದದೇ ವಹಿವಾಟು ನಡೆಸಬಹುದಾಗಿದೆಯಾದರೂ ಪೇಟಿಎಂ ಖಾತೆಯನ್ನು ಪ್ರಾರಂಭಿಸಿ ಪಿನ್ ನ್ನು ನಮೂದಿಸಲು ಮೊದಲ ಬಾರಿಗೆ ಇಂಟರ್ ನೆಟ್ ಅತ್ಯಗತ್ಯವಾಗಿದೆ.

Comments are closed.