ರಾಷ್ಟ್ರೀಯ

ಪನ್ನೀರ್ ಸೆಲ್ವಂ ಶಶಿಕಲಾ ಆಜ್ಞೆ ಪಾಲಿಸುವುದಿಲ್ಲ; ಎಐಎಡಿಎಂಕೆ ಇಬ್ಭಾಗ: ಸುಬ್ರಮಣಿಯನ್ ಸ್ವಾಮಿ

Pinterest LinkedIn Tumblr

Dr. subrahmanya_swami_2ದೆಹಲಿ: ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಅನುವು ಮಾಡಿಕೊಡುವುದಿಲ್ಲ, ಹೀಗಾಗಿ ಶೀಘ್ರವೇ ಎಐಎಡಿಎಂಕೆ ಒಡೆದು ಇಬ್ಬಾಗವಾಗುತ್ತದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸಂಸತ್ ಅಧಿವೇಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮಿ, ಒಬ್ಬ ವ್ಯಕ್ತಿಯಿಂದ ಎಐಎಡಿಎಂಕೆ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಪಕ್ಷದ ಎಲ್ಲಾ ಜವಾಬ್ದಾರಿಗಳನ್ನು ಶಶಿಕಲಾ ತೆಗೆದುಕೊಳ್ಳುತ್ತಾರೆ. ಪನ್ನೀರ್ ಸೆಲ್ವಂ ಅವರಿಗೆ ಮುಕ್ತವಾಗಿ ಆಡಳಿತ ನಡೆಸಲು ಬಿಡುವುದಿಲ್ಲ. ಹೀಗಾಗಿ ಶಶಿಕಲಾ ತಮ್ಮ ಕುಟುಂಬದವರೊಬ್ಬರನ್ನು ಈ ಹುದ್ದೆಗೆ ತಂದು ಕೂರಿಸುತ್ತಾರೆ ಎಂದು ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.
ಸೋಮವಾರ ರಾತ್ರಿ ಜಯಲಲಿತಾ ಅವರು ನಿಧನರಾದರೆಂದು ಘೋಷಿಸಿದ ಎರಡೇ ಘಂಟೆಗಳಲ್ಲಿ ಅವರ ನಿಷ್ಠ ಓ.ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಮೊದಲು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾಗೆ ಜೈಲು ಶಿಕ್ಷೆ ಆದಾಗ ಅಂದಿನ ತಮಿಳುನಾಡು ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈಗ ಜಯಲಲಿತಾ ಸಾವಿನ ನಂತರ ಪನ್ನೀರ್ ಸೆಲ್ವಂ ಮತ್ತೆ 2ನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Comments are closed.