ರಾಷ್ಟ್ರೀಯ

ಜಯಲಲಿತಾ ಮಾರ್ಗದರ್ಶಕ ಚೊ ರಾಮಸ್ವಾಮಿ ನನ್ನನ್ನು ಸಾವಿನ ವ್ಯಾಪಾರಿ ಎಂದಿದ್ದರು: ಮೋದಿ

Pinterest LinkedIn Tumblr

ramaswamy-modiನವದೆಹಲಿ: ಪತ್ರಕರ್ತ, ರಾಜಕೀಯ ವಿಶ್ಲೇಷಕ ಚೋ ರಾಮಸ್ವಾಮಿ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಆತ್ಮೀಯ ಸ್ನೇಹಿತ ಚೊ ರಾಮಸ್ವಾಮಿಯವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಬಹು ಆಯಾಮದ ವ್ಯಕ್ತಿತ್ವದ, ಬೌದ್ಧಿಕ, ಮಹಾನ್ ರಾಷ್ಟ್ರೀಯತಾವಾದಿ ಮತ್ತು ನಿರ್ಭೀತದಿಂದ ಯಾವುದೇ ವಿಷಯಗಳನ್ನು ಹೇಳುತ್ತಿದ್ದ ರಾಮಸ್ವಾಮಿಯವರನ್ನು ಎಲ್ಲರೂ ಗೌರವಿಸುತ್ತಿದ್ದರು ಮತ್ತು ಶ್ಲಾಘಿಸುತ್ತಿದ್ದರು ಎಂದಿದ್ದಾರೆ.
ನಂತರ ಅವರು ಚೆನ್ನೈಯಲ್ಲಿ ಭಾಗವಹಿಸಿದ್ದ ಎರಡು ಕಾರ್ಯಕ್ರಮಗಳ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮೋದಿಯವರು ಹೀಗೆ ಹೇಳಿದ್ದಾರೆ, ಸಿಡುಕಿನ ಚೊ ರಾಮಸ್ವಾಮಿಯವರು ನನ್ನನ್ನು ಸಾವಿನ ವ್ಯಾಪಾರಿ ಎಂದು ಪರಿಚಯಿಸಿದ್ದಾರೆ. ಈ ಸ್ಮರಣೀಯ ಸಂವಾದವನ್ನು ನೋಡಿ ಎಂದು ಮೋದಿಯವರು ಟ್ವೀಟ್ ಮಾಡಿದ್ದು, ಇನ್ನೊಂದು ಟ್ವೀಟ್ ನಲ್ಲಿ, ನಾನು ಅವರ ಹೇಳಿಕೆಗೆ ಉತ್ತರಿಸಿದ್ದೇನೆ, ಆದರೆ ಚೊ ಅವರ ವಾಕ್ಚಾತುರ್ಯಕ್ಕೆ ನನ್ನ ಮಾತು ಹೊಂದಿಕೆಯಾಗುವುದಿಲ್ಲ, ಇಲ್ಲಿ ಅವರ ಬಗ್ಗೆ ನಾನು ಹೇಳಿರುವುದು ಇದೆ ಎಂದು ಯೂಟ್ಯೂಬ್ ನ ಲಿಂಕ್ ಹಾಕಿದ್ದಾರೆ.
ರಾಮಸ್ವಾಮಿಯವರಿಗೆ ದೇಶದ ಹಲವು ರಾಜಕಾರಣಿಗಳೊಂದಿಗೆ ವೈಯಕ್ತಿಕ ಒಡನಾಟವಿತ್ತು. ಈ ವರ್ಷದ ಆರಂಭದಲ್ಲಿ ಅಸೌಖ್ಯಕ್ಕೊಳಗಾಗಿದ್ದ ರಾಮಸ್ವಾಮಿಯವರ ಆರೋಗ್ಯವನ್ನು ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ವಿಚಾರಿಸಿದ್ದರು.
ರಾಜಕೀಯ ಮ್ಯಾಗಜಿನ್ ತುಘಲಕ್ ನ ಸ್ಥಾಪಕರು ಮತ್ತು ಸಂಪಾದಕರಾಗಿದ್ದ ರಾಮಸ್ವಾಮಿ ಆಡಳಿತಾರೂಢ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ನಿರ್ಭೀತಿಯಿಂದ ಟೀಕಿಸುತ್ತಿದ್ದರು.
The feisty Cho Ramaswamy introduces me as the ‘Merchant of Death.’ Do watch this memorable interaction. https://t.co/2FsF64sVvH

— Narendra Modi (@narendramodi) December 7, 2016
I returned the favour, but don’t think I matched Cho’s eloquence. Hear what I said about him. https://t.co/wPxYLc1fTb

— Narendra Modi (@narendramodi) December 7, 2016

Comments are closed.