ನವದೆಹಲಿ(ಡಿ.10): 500 ಹಾಗೂ 1000 ರೂಪಾಯಿ ನೋಟ್ ಬ್ಯಾನ್ ಘೋಷಣೆಯಾಗಿ ಒಂದು ತಿಂಗಳಾಗಿದರೂ ATM ಹಾಗೂ ಬ್ಯಾಂಕ್ ಎದುರು ಕಂಡು ಬರುವ ುದ್ದುದ್ದ ಸಾಲುಗಳು ಮಾತ್ರ ಹಾಗೇ ಇವೆ. ಜನರು ಹಣ ಸಿಗದೆ ಪರದಾಡುತ್ತಿದ್ದಾರೆ. ಆದರೆ ಗುಜರಾತ್’ನ ಒಂದು ಊರಿನಲ್ಲಿ ಮಾತ್ರ ನೋಟ್ ಬ್ಯಾನ್ ಎಫೆಕ್ಟ್ ಕಂಡು ಬಂದಿಲ್ಲ. ಇಲ್ಲಿ ATM ಹಾಗೂ ಬ್ಯಾಂಕ್ ಎದುರು ಜನರ ಸಾಲು ಯಾವತ್ತೂ ಕಾಣುವುದೇ ಇಲ್ಲ.
ಈ ಕುರಿತಾಗಿ ಮಾಹಿತಿ ಸಂಗ್ರಹಿಸಿದಾಗ ಈ ಊರಿನಲ್ಲಿ ಒಟ್ಟು 11000ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದು, 13 ಬ್ಯಾಂಕ್’ಗಳಿವೆ. ಇಷ್ಟಾದರೂ ಈ ಊರಿನಲ್ಲೇಕೆ ಜನರು ಬ್ಯಾಂಕ್ ಎದುರು ಗುಂಪುಗೂಡುತ್ತಿಲ್ಲ ಅಂತೀರಾ? ಹಾಗಾದ್ರೆ ಇಲ್ಲಿದೆ ವಿವರ.
ವಾಸ್ತವವಾಗಿ ಇಲ್ಲಿರುವ 11000 ಮಂದಿಯಲ್ಲಿ ಬಹುತೇಕರು ಅನಿವಾಸಿ ಭಾರತೀಯರು. ಪ್ರತಿ ವರ್ಷ ಇಲ್ಲಿ 1500 ರಿಂದ 2000 ಮಂದಿ ಈ ಊರಿಗೆ ಬಂದು ಹೋಗುತ್ತಿರುತ್ತಾರೆ. ಹೀಗಾಗಿ ಇಲ್ಲಿನ ಜನರು ಬ್ಯಾಂಕ್’ನಿಂದ ಲೋನ್ ತೆಗೆದುಕೊಳ್ಳುವುದಿಲ್ಲ ಹಾಗೂ ಇಲ್ಲಿನ ಬ್ಯಾಂಕ್’ಗಳೆದುರು ನಿಮಗೆ ಸಾಲುಗಳು ಕಂಡು ಬರುವುದಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಇಲ್ಲಿನ ಜನರು ಬ್ಯಾಂಕ್’ನಿಂದ ದೂರವೇ ಉಳಿಯುತ್ತಾರೆ. ಹಣಕಾಸಿನ ವ್ಯವಹಾರವನ್ನು ಇವರು ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಮೂಲಕವೇ ನಡೆಸುತ್ತಾರೆ. ‘ನಮ್ಮಂತೆ ದೇಶದ ಪ್ರತಿಯೊಬ್ಬರು ಕ್ಯಾಷ್’ಲೆಸ್ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕು’ ಎಂಬುವುದು ಈ ಊರಿನ ಜನರ ಅಭಿಪ್ರಾಯವಾಗಿದೆ.
ರಾಷ್ಟ್ರೀಯ
Comments are closed.