ಹರಿದ್ವಾರ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮಾತನಾಡಿದರೆ ಸರಿಯಾಗಿ ಗಾಳಿಯೇ ಬರುವುದಿಲ್ಲ. ಇನ್ನು ಭೂಕಂಪದ ಮಾತೆಲ್ಲಿ ಬಂತು ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಶನಿವಾರ ಹೇಳಿದ್ದಾರೆ.
ಹರಿದ್ವಾರದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿರವ ಅವರು, ನೋಟು ನಿಷೇಧ ಕುರಿತಂತೆ ಮಾತನಾಡಿದರೆ ಸಂಸತ್ತಿನಲ್ಲಿ ಭೂಕಂಪವೇ ಆಗಿ ಬಿಡುತ್ತದೆ ಎಂಬ ರಾಹುಲ್ ಗಾಂಧಿಯವರು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸದನದಲ್ಲಿ ನಡೆದ ಚರ್ಚೆ ವೇಳೆ ರಾಹುಲ್ ಗಾಂಧಿಯವರು ನೋಟು ನಿಷೇಧ ಕುರಿತಂತೆ ಮಾತನಾಡಿದರೆ ಸಂಸತ್ತಿನಲ್ಲಿ ಭೂಕಂಪವೇ ಆಗಿ ಬಿಡುತ್ತದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರು ಮಾತನಾಡಿದರೆ ಸರಿಯಾಗಿ ಗಾಳಿಯೇ ಆಡುವುದಿಲ್ಲ. ಇನ್ನು ಭೂಕಂಪದ ಮಾತಂತೂ ದೂರ ಎಂದು ವ್ಯಂಗ್ಯವಾಡಿದ್ದಾರೆ.
ನಿನ್ನೆಯಷ್ಟೇ ಕೇಂದ್ರ ವಿರುದ್ಧ ಗುಡುಗಿದ್ದ ರಾಹುಲ್ ಗಾಂಧಿಯವರು, ನೋಟು ನಿಷೇಧ ಎಂಬುದು ದೇಶದ ಅತೀ ದೊಡ್ಡ ಹಗರಣವಾಗಿದ್ದು, ನನಗೆ ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಬೇಕಿದೆ. ಅಲ್ಲಿಯೇ ನಾನು ಎಲ್ಲವನ್ನೂ ಹೇಳುತ್ತೇನೆ. ನೋಟು ನಿಷೇಧ ಬಗ್ಗೆ ನಾನು ಮಾತನಾಡಲು ಆರಂಭಿಸಿದರೆ ಸಂಸತ್ತಿನಲ್ಲಿ ಭೂಕಂಪ ಸಂಭವಿಸುತ್ತದೆ ಎಂದು ಹೇಳಿದ್ದರು.
ರಾಷ್ಟ್ರೀಯ
Comments are closed.