ವಿಜಯವಾಡ, ಡಿ. ೧೧- ವಾರ್ಡಾ ಚಂಡಮಾರುತ ನಾಳೆ ದಕ್ಷಿಣ ಆಂಧ್ರ ಮತ್ತು ಉತ್ತರ ತಮಿಳುನಾಡು ಕರಾವಳಿಗೆ ಅಪ್ಪಳಿಸುತ್ತಿದೆ.
ಈ ಚಂಡಮಾರುತ ಅಪ್ಪಳಿಕೆಯಿಂದ ಬಿರುಗಾಳಿ ಗಂಟೆಗೆ 90 ಕಿ.ಮೀ. ವೇಗದಲ್ಲಿ ಬೀಸುವ ಸಂಭವವಿದ್ದು, ಕರಾವಳಿ ಭಾಗಗಳಲ್ಲಿ 190 ಮಿ. ಮೀ. ಮಳೆಯೂ ಆಗುತ್ತದೆ ಎಂದು ಅಂದಾಜಿಸಲಾಗಿದೆ.
ವಾರ್ಡಾ ಚಂಡಮಾರುತ ದಕ್ಷಿಣ ಬಂಗಾಳಕೊಲ್ಲಿ ಭಾಗದಲ್ಲಿ ಕೇಂದ್ರೀಕೃತವಾಗಿದ್ದು, ನಿಧಾನವಾಗಿ ಪಶ್ಚಿಮದತ್ತ ಸಾಗುತ್ತಿದೆ. ಸದ್ಯಕ್ಕೆ ಗಂಟೆಗೆ 11 ಕಿ.ಮೀ. ವೇಗದಲ್ಲಿ ಚಲಿಸುತ್ತಿರುವ ಚಂಡಮಾರುತ ಉತ್ತರ ಆಂಧ್ರ ಕರಾವಳಿ ಕಡೆ ಚಲಿಸುತ್ತ ತನ್ನ ವೇಗವನ್ನು 90 ಕಿ.ಮೀ. ಗೆ ಹೆಚ್ಚಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಕೃಷ್ಣ, ಗುಂಟೂರ್, ಪ್ರಕಾಶಂ, ಚಿತ್ತೂರ್, ಕಡಪಾ, ಅನಂತಪುರ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. 190 ಮಿ.ಮೀಟರ್ ಮಳೆಯಾಗುವ ಸಂಭವ ಇದ್ದು ಕರಾವಳಿ ಭಾಗದ ಜನಕ್ಕೆ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.
ಸಮುದ್ರದಲ್ಲಿಯೂ ಬಾರಿ ಅಲೆಗಳು ಏಳುವುದರಿಂದ ಮುಂದಿನ 48 ಗಂಟೆಗಳವರೆಗೆ ಸಮುದ್ರಕ್ಕೆ ಇಳಿಯುವ ಬಗ್ಗೆ ಅತಿ ಎಚ್ಚರಿಕೆ ವಹಿಸಲು ಮೀನುಗಾರರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಷ್ಟ್ರೀಯ
Comments are closed.