ಅಹಮದಾಬಾದ್: ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೇರುವ ಮೊದಲು ಸಹರಾ ಕಂಪೆನಿಯಿಂದ ₹ 40 ಕೋಟಿ ಹಣ ಪಡೆದಿದ್ದಾರೆ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮೆಹ್ಸನಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಸಹರಾ ಕಂಪೆನಿ ಮೋದಿ ಅವರಿಗೆ ಹಣ ನೀಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಯಲ್ಲಿ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.
ಸಹರಾ ಕಂಪೆನಿಯ ಕಚೇರಿಯ ಮೇಲೆ 2014ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಮೋದಿ ಅವರಿಗೆ ಹಣ ನೀಡಿರುವ ದಾಖಲೆಗಳೂ ಪತ್ತೆಯಾಗಿವೆ. 2013ರ ಅಕ್ಟೋಬರ್‌ನಿಂದ 2014ರ ಫೆಬ್ರುವರಿವರೆಗೆ ಸಹರಾ ಕಂಪೆನಿಯಿಂದ ಮೋದಿ ಅವರಿಗೆ ₹40 ಕೋಟಿ ಹಣ ಪಡೆದಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಬಾರಿ ಮೋದಿ ಅವರಿಗೆ ಸಹರಾ ಕಂಪೆನಿಯಿಂದ ಹಣ ಸಂದಾಯವಾಗಿದೆ ಎಂದು ರಾಹುಲ್ ಹೇಳಿದ್ದಾರೆ.
‘ಆದಾಯ ತೆರಿಗೆ ಇಲಾಖೆಯ ದಾಖಲೆಗಳ ಪ್ರಕಾರ 2013ರ ಅಕ್ಟೋಬರ್‌ನಲ್ಲಿ ₹2.5 ಕೋಟಿ, ನವೆಂಬರ್ 12ರಂದು ₹ 5 ಕೋಟಿ, ನ.27ರಂದು ₹ 2.5 ಕೋಟಿ, ನ.29ರಂದು ₹ 5 ಕೋಟಿ, ಡಿ.6ರಂದು ₹ 5 ಕೋಟಿ, ಡಿ.19ರಂದು ₹5 ಕೋಟಿ ಹಾಗೂ 2014ರ ಜನವರಿ 14ರಂದು ₹ 5 ಕೋಟಿ, ಜ.28ರಂದು ₹ 5 ಕೋಟಿ, ಫೆ. 22ರಂದು ₹ 5 ಕೋಟಿ ಹಣ ಸಹರಾ ಕಂಪೆನಿಯಿಂದ ಮೋದಿ ಸಂದಾಯವಾಗಿದೆ’ ಎಂದು ರಾಹುಲ್ ತಿಳಿಸಿದ್ದಾರೆ.
‘ಸಂಸತ್ತಿನಲ್ಲಿ ನಾನು ಮಾತನಾಡಲು ನೀವು (ಮೋದಿ) ಬಿಡಲಿಲ್ಲ. ನೀವು ನನ್ನ ಎದುರು ನಿಲ್ಲುವುದಿಲ್ಲ. ಅದು ಏಕೆಂದು ನನಗೆ ಗೊತ್ತು. ಶ್ರೀಮಂತರ ಸಾಲದ ಬಗ್ಗೆ ಮೃದುವಾಗಿರುವ ನೀವು (ಮೋದಿ) ಬಡವರು ಸಾಲ ತೀರಿಸದಿದ್ದರೆ ಜೈಲಿಗೆ ಹಾಕುತ್ತೀರಿ’ ಎಂದು ರಾಹುಲ್ ಕಿಡಿಕಾರಿದ್ದಾರೆ.
Comments are closed.