ನವದೆಹಲಿ (ಡಿ.21): ನೋಟು ಅಮಾನ್ಯ ಕ್ರಮದ ಬಳಿಕ, ಬ್ಯಾಂಕಿಂಗ್ ನಿಯಮಗಳನ್ನು ಸತತವಾಗಿ ಬದಲಾಯಿಸುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮವನ್ನು ವಿಪಕ್ಷಗಳು ಕಟುವಾಗಿ ಟೀಕಿಸಿವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಈಗ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಆಗಿ ಮಾರ್ಪಟ್ಟಿದೆ. ಕಳೆದ 43 ದಿನಗಳಲ್ಲಿ 126 ಬಾರಿ ನಿಯಮಗಳನ್ನು ಬದಲಾಯಿಸಲಾಗಿದೆ, ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.
ರೂ.5000 ಕ್ಕಿಂತ ಹೆಚ್ಚಿನ ನಗದನ್ನು ಬ್ಯಾಂಕುಗಳಲ್ಲಿ ಡಿಪಾಸಿಟ್ ಮಾಡುವುದಕ್ಕೆ ನಿರ್ಬಂಧವನ್ನು ಹೇರಿದ್ದ ರಿಸರ್ವ್ ಬ್ಯಾಂಕ್, ಇಂದು ಅದನ್ನು ಸಡಿಲಿಸಿದೆ.
ನ.8ರಂದು ನೋಟು ಅಮಾನ್ಯ ಕ್ರಮವನ್ನು ಘೋಷಿಸುವಾಗ, ಪ್ರಧಾನಿ ಮೋದಿ ಡಿ.31ರವರೆಗೆ ಹಳೆ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮಾವಣೆ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲವೆಂದಿದ್ದರು.
ರಾಷ್ಟ್ರೀಯ
Comments are closed.